ಜಿಲ್ಲೆ

ಗ್ರಾಹಕರ ಬೇಡಿಕೆಗೆ ಅನುಗುಣ ಚಿನ್ನಾಭರಣ ತಯಾರಿ - ನಿವೃತ್ತ ಶಿಕ್ಷಕಿ ಉಮಾ ವಿ.ಎಸ್.ಕೆದಿಲಾಯ ಬಣ್ಣನೆ - ಮುಳಿಯ ಚಿನ್ನೋತ್ಸವ ಉದ್ಘಾಟನೆ

Mangaluru - Nishantha Narayana


ಪುತ್ತೂರು: ಮುಳಿಯದ ಚಿನ್ನಾಭರಣ ಸಂಗ್ರಹ ಹಾಗೂ ಸೇವೆ ಅತ್ಯುತ್ತಮವಾಗಿದ್ದು, ನಾಲ್ಕು ದಶಕಗಳಿಂದ ಬಾಂಧವ್ಯ ಹೊಂದಿದ್ದೇವೆ. ಗ್ರಾಹಕರ ಬೇಡಿಕೆಗೆ ಅನುಗುಣವಾದ ಆಭರಣ ತಯಾರಿಸಿ ನೀಡುತ್ತಿರುವುದು ಖುಷಿ ತಂದಿದೆ. ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ನಡುವಿನ ಒಡನಾಟ ಉತ್ತಮವಾಗಿರುವುದರಿಂದ ಮಳಿಗೆಯ ಬೆಳವಣಿಗೆ ಸಾಧ್ಯವಾಗಿದೆ ಎಂದು ವಿಟ್ಲದ ನಿವೃತ್ತ ಶಿಕ್ಷಕಿ ಉಮಾ ವಿ. ಎಸ್. ಕೆದಿಲಾಯ ಹೇಳಿದರು.


ಪುತ್ತೂರು ಮುಳಿಯ ಜುವೆಲ್ಸ್‌ನಲ್ಲಿ ನವರಾತ್ರಿ ಉತ್ಸವ ಅಂಗವಾಗಿ ಪ್ರಾರಂಭವಾದ ಮುಳಿಯ ಚಿನ್ನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಉದ್ಯಮಿ ಸುಹಾಸ್ ಮರಿಕೆ ಮಾತನಾಡಿ ಮುಳಿಯದಲ್ಲಿ ಸಿಗುವ ಸೇವೆ ನಿಷ್ಕಲ್ಮಶವಾಗಿದ್ದು, ಎಲ್ಲರೂ ಮಿತ್ರರು ಎನ್ನುವ ರೀತಿಯಲ್ಲಿ ವ್ಯವಹರಿಸುತ್ತಿದ್ದಾರೆ. ಪುತ್ತೂರಿನ ಜನರಿಗೆ ಹೊಸ ವಿಚಾರಗಳನ್ನು ನೀಡುವ ವಿಚಾರದಲ್ಲಿ ಮುಳಿಯ ಮುಂದೆ ಇರುತ್ತದೆ. ವಿವಿಧ ವಿಚಾರದಲ್ಲಿ ಮುನ್ನಡೆಯುವವರಿಗೆ ಪ್ರೋತ್ಸಾಹ ನೀಡುವಲ್ಲಿಯೂ ಮುಳಿಯ ಮುಂಚೂಣಿಯಲ್ಲಿದೆ ಎಂದರು.

ಚಿನ್ನೋತ್ಸವದ ಮೊದಲ ಚಿನ್ನ ಖರೀದಿದಾರ ಉದ್ಯಮಿ ಗಣೇಶ್ ಭಟ್ ಮಾತನಾಡಿ ವ್ಯವಹಾರಗಳಲ್ಲಿ ನಂಬಿಕೆ ಮುಖ್ಯ, ಅದನ್ನು ಉಳಿಸಿಕೊಂಡು ಮುಂದೆ ಹೋಗುವುದು ಸವಾಲಿನ ವಿಚಾರ. ಮುಳಿಯ ದಶಕಗಳಿಂz ನೈಪುಣ್ಯತೆಯಿಂದ ಕೆಲಸವನ್ನು ನಿರ್ವಹಿಸುತ್ತಿರುವುದರಿಂದ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಂಡಿದೆ ಎಂದರು.

ಮುಳಿಯ ಗ್ರಾಹಕರ ಮಕ್ಕಳಿಗೆ ಚಿನ್ನೋತ್ಸವದ ಅಂಗವಾಗಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಉದ್ಯಮಿ ಲಲಿತಾ ಭಟ್, ಮುಳಿಯ ಜುವೆಲ್ಸ್ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ನಿರ್ದೇಶಕಿ ಅಶ್ವಿನಿ ಕೃಷ್ಣ ಮುಳಿಯ, ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.


ಹರಿಣಾಕ್ಷಿ ಪ್ರಾರ್ಥಿಸಿದರು. ಕಿಶೋರ್ ಸ್ವಾಗತಿಸಿದರು. ಆನಂದ ಕುಲಾಲ್ ವಂದಿಸಿದರು. ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಸಂಜೀವ ಸಹಕರಿಸಿದರು.


ಚಿನ್ನ ಹಾಗೂ ಭೂಮಿಯ ಉಪಯೋಗ ಮಾಡಿದಂತೆ ಮೌಲ್ಯ ಹೆಚ್ಚಾಗುತ್ತದೆ. ಚಿನ್ನಕ್ಕೆ ಜಗತ್ತಿನ ಯಾವ ಭಾಗಕ್ಕೆ ಹೋದರೂ ಮೌಲ್ಯವಿದೆ. ಚಿನ್ನ ಎಂಬುದು ಶುಭ ಸೂಚಕವಾಗಿದ್ದು, ಸಂಭ್ರಮಾಚರಣೆ ಸಂದರ್ಭ ಶುಭವನ್ನು ಮನೆಗೆ ತೆಗೆದುಕೊಂಡು ಹೋಗುವುದು ವಾಡಿಕೆಯಾಗಿಯಾಗಿದೆ. ಪ್ರತಿಯೊಬ್ಬರಿಗೂ ಚಿನ್ನ ಖರೀದಿಗೆ ಅವಕಾಶ ಸಿಗಬೇಕೆಂಬ ನಿಟ್ಟಿನಲ್ಲಿ ವರ್ಷಕ್ಕೆ ಎರಡು ಬಾರಿ ಚಿನ್ನೋತ್ಸವ ನಡೆಸಲಾಗುತ್ತಿದೆ. ಲೈಟ್ ವೈಟ್ ನೆಕ್ಲೇಸ್, ಟರ್ಕಿ ರೂಬಿ ಡಿಸೈನ್ ಸೇರಿ ವಿವಿಧ ಚಿನ್ನದ ವಿನ್ಯಾಸಗಳಿವೆ. ೧೨೦೦ಕ್ಕೂ ಅಽಕ ವಿನ್ಯಾಸದ ವಜ್ರದ ಆಭರಣಗಳ ಸಂಗ್ರಹವಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
| ಕೃಷ್ಣ ನಾರಾಯಣ ಮುಳಿಯ
ಮುಳಿಯ ಜುವೆಲ್ಸ್ ಆಡಳಿತ ನಿರ್ದೇಶಕರು