ಜಿಲ್ಲೆ

ಸ್ವರ್ಣೋದ್ಯಮದಲ್ಲಿ ಚಿನ್ನದಂಥ ಹೆಸರು ಮಾಡಿದ ಮುಳಿಯ - ಸಂಧ್ಯಾ ಸಾಯ ಬಣ್ಣನೆ - ಪುತ್ತೂರಿನಲ್ಲಿ ಡೈಮಂಡ್ ಫೆಸ್ಟ್‌ಗೆ ಚಾಲನೆ

Mangaluru - Nishantha Narayana

ಪುತ್ತೂರು: ಮುಳಿಯ ಅಂದರೆ ನಂಬಿಕೆಯಾಗಿದ್ದು, ಸ್ವರ್ಣೋದ್ಯಮದಲ್ಲಿ ಚಿನ್ನದಂತೆ ಹೆಸರು ಮಾಡಿದ ಸಂಸ್ಥೆಯಾಗಿದೆ. ವ್ಯವಹಾರದ ಜತೆಗೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದೆ. ವೈವಿಧ್ಯಮಯ ವಿನ್ಯಾಸಗಳನ್ನು ಮುಳಿಯದಲ್ಲಿ ಕಾಣಬಹುದು. ಡೈಮಂಡ್ ಖರೀದಿಯ ಮೂಲಕ ಹೂಡಿಕೆಯಾಗಿಯೂ ಬಳಸಿಕೊಳ್ಳಬಹುದು ಎಂದು ಸಾಯ ಎಂಟರ್‌ಪ್ರೈಸಸ್‌ನ ಮಾಲಕಿ ಸಂಧ್ಯಾ ಸಾಯ ಹೇಳಿದರು.

ಪುತ್ತೂರು ಕೋರ್ಟ್ ರಸ್ತೆಯಲ್ಲಿ ನಾವೀನ್ಯ ಹಾಗೂ ಪರಿಶುದ್ಧ ಆಭರಣದ ಮೂಲಕ ಮನೆಮಾತಾಗಿರುವ ಮುಳಿಯ ಜುವೆಲ್ಸ್‌ನ ಡೈಮಂಡ್ ಫೆಸ್ಟ್‌ಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಸಂಗೀತ ಶಿಕ್ಷಕಿ ಚೈತ್ರಿಕಾ ಕೋಡಿಬೈಲ್ ಮಾತನಾಡಿ, ವಜ್ರ ಎಂದರೆ ಬಲ ಹಾಗೂ ಹೊಳಪು, ಸುಂದರವಾದ ಆಭರಣಗಳನ್ನು ನೆನಪಿಸುತ್ತದೆ. ರಾಜ್ಯಾದ್ಯಂತ ಪ್ರಸಿದ್ಧಿಯನ್ನು ಪಡೆದ ಮುಳಿಯ ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯುವಂತಾಗಲಿ ಮತ್ತು ಮುಳಿಯ ಪರಿವಾರ ಇನ್ನಷ್ಟು ಬಲಶಾಲಿಯಾಗಿ ಬೆಳೆಯಲಿ. ವಜ್ರೋತ್ಸವ ಯಸ್ಸು ಪಡೆಯಲಿ ಎಂದು ಹಾರೈಸಿದರು.

ಮಹಾಲಕ್ಷ್ಮಿ ಗ್ಲಾಸ್ ಮತ್ತು ಪ್ಲೈವುಡ್ ಉದ್ಯಮದ ಮಾಲಕಿ ರಿತ್ವಿಕಾ ಭರತ್ ಮಾತನಾಡಿ, ಒಂದು ತಿಂಗಳ ಕಾಲ ನಡೆಯುವ ಡೈಮಂಡ್ ಫೆಸ್ಟ್‌ಗೆ ಉತ್ತಮ ಪ್ರತಿಕ್ರಿಯೆ ಸಿಗಲಿ. ಗ್ರಾಹಕರಿಗೆ ಅನುಕೂಲಕರವಾಗಿ ಮೂಡಿ ಬರಲಿ. ಎಲ್ಲರೂ ಸೇರಿ ಕಾರ್ಯಕ್ರಮದ ಉದ್ದೇಶವನ್ನು ಪರಿಪೂರ್ಣಗೊಳಿಸುವಂತಾಗಲಿ ಎಂದರು.

೯ ಸಾವಿರದಿಂದ ೧೮ ಲಕ್ಷದವರೆಗಿನ ಸುಮಾರು ೪ ಸಾವಿರಕ್ಕೂ ಅಽಕ ವಿನ್ಯಾಸದ ಆಭರಣಗಳು ಉತ್ಸವದಲ್ಲಿ ಪ್ರದರ್ಶನಕ್ಕೆ ಲಭ್ಯವಿರಲಿವೆ. ವಜ್ರಾಭರಣದ ವಿವಿಧ ನೂತನ ವಿನ್ಯಾಸಗಳನ್ನು ಅನಾವರಣ ಮಾಡಲಾಯಿತು.

ಆಡಳಿತ ನಿರ್ದೇಶಕರಾದ ಕೃಷ್ಣವೇಣಿ ಪ್ರಸಾದ್ ಮುಳಿಯ, ಅಶ್ವಿನಿ ಕೃಷ್ಣ ಮುಳಿಯ, ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್ ಉಪಸ್ಥಿತರಿದ್ದರು. ಸಿಬ್ಬಂದಿ ಪೂಜಿತಾ ಪ್ರಾರ್ಥಿಸಿದರು. ಸಿಬ್ಬಂದಿ ರಾಜೇಶ್ ಸ್ವಾಗತಿಸಿದರು. ಸಿಬ್ಬಂದಿ ಪ್ರಭಾಕರ ಭಟ್ ವಂದಿಸಿದರು. ಪ್ಲೋರ್ ಮ್ಯಾನೇಜರ್ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.

ಬಂಗಾರ ಜೀವನದ ಆಧಾರವಾದರೆ, ವಜ್ರ ಆತ್ಮವಿಶ್ವಾಸದ ಜತೆಗೆ ಶಕ್ತಿಯನ್ನು ತುಂಬಿ ಭದ್ರತೆಯನ್ನು ನೀಡುತ್ತದೆ. ನಿತ್ಯ ಬಳಕೆ, ಅಲಂಕಾರ ಬಳಕೆ ಎಂಬುದನ್ನು ಕೂಲಂಕಷವಾಗಿ ನೋಡಿ ಬಳಕೆ ಮಾಡಿದಾಗ ಉತ್ತಮ ರೀತಿಯಲ್ಲಿ ಬಾಳ್ವಿಕೆ ಬರುತ್ತದೆ. ಹಬ್ಬವನ್ನು ಗ್ರಾಹಕರು ಪ್ರೀತಿಯಿಂದ ಸ್ವೀಕರಿಸಿ ಯಶಸ್ವಿಗೊಳಿಸಬೇಕಾಗಿದೆ.

| ಕೃಷ್ಣವೇಣಿ ಪ್ರಸಾದ್ ಮುಳಿಯ

ಆಡಳಿತ ನಿರ್ದೇಶಕಿ

ವರ್ಷಕ್ಕೆ ಎರಡು ಬಾರಿ ವಜ್ರೋತ್ಸವವನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ಪ್ರತಿಯೊಬ್ಬರ ಕೈಗೆಟಕುವ ಬೆಲೆಯಲ್ಲಿ ವಜ್ರದ ಆಭರಣಗಳು ಲಭಿಸುತ್ತಿವೆ. ವಿಭಿನ್ನ ಶೈಲಿಯ ಪೆಂಡೆಂಟ್‌ಗಳು ಈ ಬಾರಿಯ ವಿಶೇಷವಾಗಿದೆ. ವಜ್ರಕ್ಕೆ ವರ್ಷಕ್ಕೆ ಶೇ.೨೦ರಷ್ಟು ಮೌಲ್ಯವರ್ಧನೆಯಾಗುತ್ತದೆ.

| ಅಶ್ವಿನಿ ಕೃಷ್ಣ ಮುಳಿಯ

ಆಡಳಿತ ನಿರ್ದೇಶಕಿ