ಪುತ್ತೂರು: ಮುಳಿಯ ಜ್ಯುವೆಲ್ಸ್ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆ.೧೧ರಂದು ಬೆಳಗ್ಗೆ ೧೦ರಿಂದ ಸ್ವಾತಂತ್ರ್ಯ ಹೋರಾಟಗಾರರು ವಿಡಿಯೋ ಕಾನ್ಫರೆನ್ಸ್ ಮೂಲಕ ಛದ್ಮವೇಷ ಸ್ಪರ್ಧೆಯನ್ನು ಹಾಕಿಕೊಂಡಿದೆ.
ಛದ್ಮವೇಷ ೩ರಿಂದ ೭ ವರ್ಷ ಮತ್ತು ೮ರಿಂದ ೧೨ವರ್ಷಗಳ ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯನ್ನು ಝೂಮ್ ಆಪ್ ಮೂಲಕ ನಡೆಸಲಾಗುವುದು. ಸ್ಪಽಗಳು ಮನೆಯಿಂದಲೇ ವೇಷಭೂಷಣಗಳನ್ನು ಧರಿಸಿ ಮುಳಿಯ ಜ್ಯುವೆಲ್ಸ್ ಝೂಮ್ ಲಿಂಕ್ ನಲ್ಲಿ ಭಾಗವಹಿಸಬೇಕಾಗಿದೆ. ಪ್ರತಿ ಸ್ಪಽಗೆ ೨ ನಿಮಿಷಗಳ ಕಾಲಾವಾಕಾಶವನ್ನು ನೀಡಲಾಗುತ್ತಿದ್ದು, ನೃತ್ಯ, ಡೈಲಾಗ್, ಹಿನ್ನೆಲೆ ಸಂಗೀತ ಬಳಸಿಕೊಳ್ಳಬಹುದಾಗಿದೆ. ಭಾಗವಹಿಸುವ ಸ್ಪಽಗಳು ಆ.೮ರ ಒಳಗಾಗಿ ಹೆಸರನ್ನು ೯೩೫೩೦೩೦೯೧೬ ಮೂಲಕ ನೋಂದಾಯಿಸಿಕೊಳ್ಳಬೇಕಾಗಿದೆ.