ಹೂವಿನಹಡಗಲಿ: ತಾಲೂಕಿನಾದ್ಯಂತ ಹಿಂದು-ಮುಸ್ಲಿಮ ಭಾವೈಕ್ಯ ಸಾರುವ ಮೊಹರಂ ಕೊನೆ ದಿನವನ್ನು ಶನಿವಾರ ಭಕ್ತರು ಸಂಭ್ರಮದಿಂದ ಆಚರಿಸಿ, ಅಲಾಯಿ ದೇವರ ಮೆರವಣಿಗೆ ನಡೆಸಿದರು.
ತಾಲೂಕಿನ ಹಿರೇಹಡಗಲಿ, ನಾಗತಿಬಸಾಪುರ, ಹೊಳಲು, ಇಟ್ಟಿಗಿ, ಬ್ಯಾಲಹುಣಸಿ, ಹೊಳಗುಂದಿ, ಕೊಂಬಳಿ ಗ್ರಾಮಗಳಲ್ಲಿ ಪ್ರತಿಷ್ಠಾಪಿಸಿದ ಅಲಾಯಿ ದೇವರಿಗೆ ಎಣ್ಣೆ, ಸಕ್ಕರೆ, ದೂಪ ಅರ್ಪಿಸಿ ಪೂಜೆ ಸಲ್ಲಿಸಿದರು. ಹಿಂದು, ಮುಸ್ಲಿಮ ಜೊತೆಗೂಡಿ ಅಗ್ನಿ ಕುಂಡದಲ್ಲಿ ನಡೆದು ಭಕ್ತಿ ಸರ್ಮಪಿಸಿದರು. ಹರಕೆಹೊತ್ತ ಭಕ್ತರು ಹುಲಿ ಬಣ್ಣ ಮತ್ತು ಹಳ್ಳಳ್ಳಿ ವೇಷ ಧರಿಸಿ ಹರಕೆ ತೀರಿಸಿದರು.
ಇದನ್ನೂ ಓದಿ: ಕೊನೆಯ ದಿನವಾದ ಶನಿವಾರ ಸಂಭ್ರಮದ ಮೊಹರಂ ಆಚರಣೆ
ವಿವಿಧ ಭಾಗಗಳಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರು ಶನಿವಾರ ಸಂಜೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ತೇರು ಹನುಮಪ್ಪ ದೇವರ ಪಾದಗಟ್ಟೆಯ ಬಳಿ ಸಮಾಗಮಗೊಂಡ ಹಳ್ಳಕ್ಕೆ ತೆರಳಿದವು. ಮೆರವಣಿಗೆಯಲ್ಲಿ ಹಸೇನ್-ಹುಸೇನ್ ಎಂಬ ಘೋಷಣೆ ಮೊಳಗಿದವು.