ಜಿಲ್ಲೆ

ಕುರುವ ಗ್ರಾಮದಲ್ಲಿ ಮೊಹರಂ ಆಚರಣೆ

ನ್ಯಾಮತಿ: ತಾಲೂಕಿನ ಕುರುವ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬವನ್ನು (ಬಾಬಯ್ಯನ ಹಬ್ಬ) ಸರ್ವ ಧರ್ಮಿಯರು ಶ್ರದ್ಧಾ ಭಕ್ತಿಯಿಂದ ಭಾನುವಾರ ಆಚರಿಸಿದರು.
ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಇಮಾಂ ಹುಸೇನರ ಹಸ್ತಗಳ ಬೆಳ್ಳಿಯ ಪ್ರತಿಕೃತಿಯನ್ನು ಧರ್ಮಾತೀತವಾಗಿ ಜನರು ಪೂಜಿಸಿದರು.
ಹಬ್ಬದ ಪ್ರಯುಕ್ತ ಶನಿವಾರ ರಾತ್ರಿ ಅಗ್ನಿಕುಂಡ ನಡೆಸಲಾಯಿತು. ಹರಕೆ ಹೊತ್ತ ಭಕ್ತರು ದೇವರಿಗೆ ಮಂಡಕ್ಕಿ, ಕಾಳು ಮೆಣಸು, ಉಪ್ಪು, ಕಟ್ಟಿಗೆಗಳನ್ನು ನೀಡಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.