ಹೊಸಪೇಟೆ: ವಿಜಯನಗರ ಜಿಲ್ಲೆಯ ವಿವಿಧ ತಾಲ್ಲೂಕಿನ ೬ ಗ್ರಾಮಗಳಲ್ಲಿ ೧೦ ದಿನಗಳ ಕಾಲ ಆಚರಿಸುವ ಮೊಹರಂ ಹಬ್ಬವನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಎಂ.ಎಸ್.ದಿವಾಕರ್ ಆದೇಶಿಸಿದ್ದಾರೆ.
ಈ ಹಿಂದೆ ಗ್ರಾಮದಲ್ಲಿ ನಡೆದಿರುವ ಘಟನೆಗಳು ಹಾಗೂ ಪ್ರಸ್ತುತ ಸನ್ನಿವೇಶಗಳನ್ನು ಆಧರಿಸಿ ಕೂಡ್ಲಿಗಿ ಪೊಲೀಸ್ ಠಾಣೆಯ ಹನಸಿ, ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ತಿಮ್ಮಲಾಪುರ, ಹೊಸಹಳ್ಳಿ ಪೊಲೀಸ್ ಠಾಣೆಯ ಐಗಳ ಮಲ್ಲಾಪುರ ಮತ್ತು ಟಿ.ಕಲ್ಲಹಳ್ಳಿ ಹಾಗೂ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಹಳೇ ಮಲಪನಗುಡಿ ಮತ್ತು ಕಾರಿಗನೂರು ಗ್ರಾಮಗಳಲ್ಲಿ ಸಾರ್ವಜನಿಕವಾಗಿ ಜನರು ಗುಂಪು ಸೇರದಂತೆ, ಮೆರವಣಿಗೆಗಳನ್ನು ನಡೆಸದಂತೆ ಜೊತೆಗೆ ಜು.೨೦ ರಿಂದ ೨೯ರವರೆಗೆ ಮೊಹರಂ ಹಬ್ಬದ ಆಚರಣೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.