ಜಿಲ್ಲೆ

ಮಹಮ್ಮದ್ ಅಕ್ಮಲ್ ಹತ್ಯೆ ಪ್ರಕರಣ : ಪಾಲಿಕೆ ಮಾಜಿ ಸದಸ್ಯ ಸೇರಿ ನಾಲ್ವರ ಬಂಧನ

ಮೈಸೂರು: ನಗರ ಪಾಲಿಕೆ ಮಾಜಿ ಸದಸ್ಯ ಅಯಾಜ್ (ಪಂಡು) ಸೋದರ, ಧರ್ಮ ಗುರು ಮಹಮ್ಮದ್ ಅಕ್ಮಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಿಸಿಬಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪಾಲಿಕೆ ಮಾಜಿ ಸದಸ್ಯ ಬಷೀರ್, ಇಬ್ರಾಹಿಂ, ಪರ್ವೀಜ್ ಬೇಗ್ ಹಾಗೂ ಮಹಮದ್ ಇಲಿಯಾಸ್ ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ಯಾನರ್ ಕಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಮ್ಮದ್ ಅಕ್ಮಲ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಧ್ವೇಷ ಸಾಧಿಸಿದ ಆರೋಪಿಗಳು ಮಾ.8 ರಂದು ರಾಜೀವ್ ನಗರದ ಆರ್ಯಬೇಕರಿ ಬಳಿ ಮಹಮ್ಮದ್ ಅಕ್ಮಲ್ ಅವರನ್ನು ಹತ್ಯೆಗೈದಿದ್ದರು. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಬಂಧನ: ವಿವಿ ಮೊಹಲ್ಲಾದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕಟ್ಟಡವೊಂದರ ಮೇಲೆ ಮಂಗಳವಾರ ಸಿಸಿಬಿ ಪೊಲೀಸರು ದಾಳಿ ನಡೆಸಿ ಐವರು ಯುವತಿಯರನ್ನು ರಕ್ಷಣೆ ಮಾಡಿ, ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯನ್ನು ಬಂಧಿಸಿದ್ದಾರೆ.

ಆರೋಪಿಯಿಂದ 7 ಮೊಬೈಲ್ ಮತ್ತು 10,900 ರೂ. ನಗದು ವಶಪಡಿಸಿಕೊಂಡಿದ್ದಾರೆ. ವಿವಿ ಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.