ಜಿಲ್ಲೆ

ಸಕಾಲದಲ್ಲಿ ಸಾಲ ಮರು ಪಾವತಿಸಿ

ಎ. ಆರ್. ರಘುರಾಮ

ಮೂಗೂರು: ಸಾಲವನ್ನು ಸಕಾಲದಲ್ಲಿ ಸಂಘಕ್ಕೆ ಮರು ಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ. ಜಿ.ನಾಗೇಂದ್ರ ಕುಮಾರ್ ಹೇಳಿದರು. ಮೂಗೂರು ಸಮೀಪದ ಬಾಣಹಳ್ಳಿಯ ಸಂಘದ ಆವರಣದಲ್ಲಿ ಆಯೋಜಿಸಿದ್ದ 2024 - 25 ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ವಾಟಿಸಿ ಮಾತನಾಡಿದರು. ಸಂಘದಲ್ಲಿ ರೈತರಿಗೆ ಬೆಳೆ ಸಾಲ, ಮಧ್ಯಮಾವಧಿ ಸಾಲ, ಮಹಿಳಾ ಸಂಘಗಳಿಗೆ ಸಾಲ ಸೇರಿದಂತೆ ಅನೇಕ ರೀತಿಯ ಸಾಲ ಸೌಲಭ್ಯ ನೀಡಲಾಗಿದೆ. ಆದರೆ ಸಕಾಲದಲ್ಲಿ ಮರು ಪಾವತಿ ಮಾಡದಿದ್ದರೆ ಪ್ರಗತಿ ಸಾಧ್ಯವಿಲ್ಲ. ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಂಕಲ್ಪ ಮಾಡಲಾಗಿದೆ. ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಸಾಲ ಸೌಲಭ್ಯವನ್ನು ಸರ್ಕಾರದಿಂದ ಮಂಜೂರು ಮಾಡಿಸುವುದಾಗಿ ಅವರು ಭರವಸೆ ನೀಡಿದರು.

ಕಳೆದ ಸಾಲಿಗಿಂತ ಈ ಬಾರಿ ಸಂಘದಲ್ಲಿ ಲಾಭಾಂಶ ಕಡಿಮೆಯಾಗಿದೆ. ಸದಸ್ಯರು ಒಗ್ಗಟ್ಟಾಗಿ ಸಹಕಾರ ನೀಡಿದರೆ ಉನ್ನತಿಗೆ ಕೊಂಡೊಯ್ಯಲು ಸಾಧ್ಯವಾಗುತ್ತಿದೆ ಎಂದರು. ಸಿಇಒ ಜೀವೇಶ್ ಕುಮಾರ್ ಮಾತನಾಡಿ, ಸ್ವಸಹಾಯ ಗುಂಪಿನ ಸದಸ್ಯರಿಗೆ 1. 75 ಲಕ್ಷ ರೂ. ಸಾಲವನ್ನು ವಿತರಿಸಲಾಗಿದೆ ಎಂದರು.

ಸಂಘದ ಉಪಾಧ್ಯಕ್ಷ ಟಿ ಎಂ ಪುಟ್ಟೇಗೌಡ, ನಿರ್ದೇಶಕರಾದ ಬಿ.ಸಿ. ಮಹೇಶ್, ಎಚ್. ಪಿ.

ಮಂಜುನಾಥ್, ಮಲ್ಲಪ್ಪ, ಮಂಜುನಾಥ್, ಟಿ.ಎಸ್. ರವಿಕುಮಾರ್, ರೇವಣ್ಣ ಸ್ವಾಮಿ, ಟಿ.ಸಿ. ನಾಗೇಶ್, ನಂಜುಂಡಯ್ಯ, ಮಹೇಶ್ವರಿ, ಶಿವ ನಾಗಮ್ಮ, ಡಿಸಿಸಿ ಬ್ಯಾಂಕ್ ಪ್ರತಿನಿಧಿ ರಾಚಪ್ಪ ತೆಳ್ಳನೂರು, ಕಮರವಾಡಿ, ಬಾಣಹಳ್ಳಿ, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.