ಜಿಲ್ಲೆ

ನಾಡಿಗೆ ಮುದ್ರಾಡಿ ಸೇವೆ ಅಪಾರ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಹೆಬ್ರಿ

ನಾಡಿಗೆ ಅಂಬಾತಯನ ಮುದ್ರಾಡಿಯವರ ಸೇವೆ ಅಪಾರ. ಮುಂದಿನ ಶತಮಾನಕ್ಕೂ ಶಾಶ್ವತ ಪರಿಚಯಿಸಲು ಮಹಾಕಾವ್ಯ ರಚಿಸುವುದಾಗಿ ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ಹೇಳಿದರು.

ಮುದ್ರಾಡಿ ಶಾಲಾ ವಠಾರದಲ್ಲಿ ಭಾನುವಾರ ಸಾಹಿತಿ, ಹರಿದಾಸ ಅಂಬಾತನಯ ಮುದ್ರಾಡಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಬರಹಗಾರ ಶುಂಠಿ ಸತ್ಯನಾರಾಯಣ ಭಟ್ ಪ್ರಶಸ್ತಿ ಸ್ವೀಕರಿಸಿದರು. ಉಡುಪಿ ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ.ಗಂಗಾಧರ ರಾವ್ ಅಧ್ಯಕ್ಷತೆ ವಹಿಸಿದ್ದರು. ಡಾ.ರಶ್ಮಿ ಗುರುಮೂರ್ತಿ, ಮುದ್ರಾಡಿ ವೈದ್ಯ ಡಾ.ಎಂ.ಎಸ್.ರಾವ್, ಉದ್ಯಮಿ ಮುದ್ರಾಡಿ ಸಿರಿಬೀಡು ದಿವಾಕರ ಎನ್.ಶೆಟ್ಟಿ, ಮುದ್ರಾಡಿ ಶಾಲೆ ಮುಖ್ಯ ಶಿಕ್ಷಕ ಶ್ರೀನಿವಾಸ ಭಂಡಾರಿ, ಮುದ್ರಾಡಿ ಗ್ರಾಪಂ ಅಧ್ಯಕ್ಷೆ ವಸಂತಿ ಪೂಜಾರಿ, ಅಂಬಾತನಯ ಮುದ್ರಾಡಿ ಪುತ್ರ ಸನತ್ ಕುಮಾರ್ ಮುದ್ರಾಡಿ, ಅಕ್ಕಮ್ಮ ಕೇಶವ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಉಡುಪಿ ಅಭಿಜ್ಞಾ ನೃತ್ಯಭೂಮಿ ಟ್ರಸ್ಟ್‌ನಿಂದ ನೃತ್ಯ ವಲ್ಲರಿ ಡಾ.ರಶ್ಮಿ ಗುರುಮೂರ್ತಿ ಮತ್ತು ಶಿಷ್ಯರಿಂದ ಭರತನಾಟ್ಯ ಕೂಚಿಪುಡಿ ಹಾಗೂ ನೃತ್ಯರೂಪಕ ಪ್ರಸ್ತುತಿ ನಡೆಯಿತು. ವಿಜಯ ಕುಮಾರ್ ಮುದ್ರಾಡಿ ಸ್ವಾಗತಿಸಿದರು. ಪ್ರಸನ್ನ ಮುದ್ರಾಡಿ ನಿರೂಪಿಸಿದರು. ಲಲಿತಾ ಎಂ.ಸನ್ಮಾನ ಪತ್ರ ವಾಚಿಸಿದರು. ಶ್ರೀ ಮುದ್ರಾಡಿ ವಂದಿಸಿದರು.

ಅಂಬಾತನಯರ ಎದುರು ನಾನೇನೂ ಅಲ್ಲ, ಅವರ ಪ್ರೀತಿಗಳಿಸಿದ್ದೇನೆ. ಅವರ ಋಣ ನನ್ನ ಮೇಲಿದೆ. ಪ್ರೀತಿಗಾಗಿ ಪ್ರಶಸ್ತಿ ಸ್ವೀಕರಿಸಿದ್ದೇನೆ. ಎಲ್ಲ ಆಯಾಮಗಳಲ್ಲಿ ಬಹಳಷ್ಟು ಎತ್ತರಕ್ಕೆ ಏರಿದವರು. -ಶುಂಠಿ ಸತ್ಯನಾರಾಯಣ ಭಟ್, ಕಲಾ ಸಂಘಟಕ https://www.vijayavani.net/palliative-care-is-a-vital-need-of-man https://www.vijayavani.net/thinking-about-a-beneficial-project