ಜಿಲ್ಲೆ

ಮುದ್ರಾಡಿಯಲ್ಲಿ ಕಾರು ಬೆಂಕಿಗಾಹುತಿ

Udupi

ಹೆಬ್ರಿ: ತಾಲೂಕಿನ ಮುದ್ರಾಡಿ ಬಳಿ ಮಂಗಳವಾರ ಮುಂಜಾನೆ ಕಾರೊಂದು ಬ್ಯಾಟರಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿಗಾಹುತಿಯಾಗಿದೆ. ಕೂಡಲೇ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಇದು ಹಾವೇರಿಯ ರಮೇಶ್ ಅವರಿಗೆ ಸೇರಿದ ಕಾರು. ಕಾರ್ಕಳ ಅಗ್ನಿಶಾಮಕ ಠಾಣಾಧಿಕಾರಿ ಬಿ.ಎಂ.ಸಂಜೀವ, ದಫೇದಾರ್ ರೂಪೇಶ್, ಜಯ ಮೂಲ್ಯ, ಮನೋಹರ ಪ್ರಸಾದ್, ನಿತ್ಯಾನಂದ, ಸುಜಯ ಭಾಗವಹಿಸಿದ್ದರು.