ಜಿಲ್ಲೆ

ನಿಜಶರಣ ಅಂಬಿಗರ ಚೌಡಯ್ಯ ನಿಗಮಕ್ಕೆ 500 ಕೋಟಿ ರೂ. ಬಿಡುಗಡೆ ಮಾಡಿ: ಉಮೇಶ ಮುದ್ನಾಳ ಆಗ್ರಹ

ಜನಜಾಗೃತಿ ಅಭಿಯಾನಕ್ಕೆ ಉಮೇಶ ಕೆ ಮುದ್ನಾಳ ಚಾಲನೆ
ಯಾದಗಿರಿ: ಪ್ರತಿ ವರ್ಷದಂತೆ ಈ ವರ್ಷವೂ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಜನವರಿ ೨೧ ರಂದು ಸರ್ಕಾರದಿಂದ ಆಚರಿಸಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಡಿಸೆಂಬರ್ ೦೯ ರಿಂದ ಜನವರಿ ೧೯ ರವರೆಗೆ ನಿರಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗ್ರಾಮ ಮತ್ತು ಹೋಬಳಿ, ತಾಲೂಕಾ ಮತ್ತು ಜಿಲ್ಲಾ ಮಟ್ಟದಲ್ಲಿ ಜನಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಗುರುಮಠಕಲ್ ತಾಲ್ಲೂಕಿನ ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಗೆ ಬರುವ ತಾತಳಗೇರಾ ಗ್ರಾಮದಲ್ಲಿ ಕರಪತ್ರ ಬಿಡುಗಡೆ ಮಾಡಿ ಪ್ರಮುಖ ರಸ್ತೆಗಳಲ್ಲಿ ತಮಟೆ ಬಾರಿಸುವ ಮುಖಾಂತರ ಅದ್ದೂರಿಯಾಗಿ ಚಾಲನೆ ನೀಡಲಾಯಿತು
ಮೊದಲಿಗೆ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ, ಕಾರ್ಯಕ್ರಮಕ್ಕೆ ಕರ್ನಾಟಕ ಪ್ರದೇಶ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಕರಪತ್ರ ಬಿಡುಗಡೆ ಮಾಡುವ ಮೂಲಕ ಅದ್ದೂರಿ ಚಾಲನೆ ನೀಡಿ ಮಾತನಾಡಿ, ರಾಜ್ಯ ಸರ್ಕಾರ ಅಂಬಿಗರ ಚೌಡಯ್ಯ ನಿಗಮ ಮಾಡಿದೆ ಆದರೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಿಲ್ಲ. ಆದ್ದರಿಂದ ಈ ಬಾರಿ ನಿಗಮಕ್ಕೆ ೫೦೦ ಕೋಟಿ ರೂ. ನೀಡಬೇಕೆಂದು ಆಗ್ರಹಿಸಿದರು.
ಇದೇ ಸಂಧರ್ಬದಲ್ಲಿ ಗ್ರಾಮದ ಶಿಲ್ಪಿಗಳಾದ ಮಲ್ಲಿಕಾರ್ಜುನ ದುರ್ಗದ ಶಿಲ್ಪಿ ಮಾರೆಪ್ಪ ನಂದಳ್ಳಿ ಶಿಲ್ಪಿ  ಆಂಜನೇಯ ದೇವಸ್ತಾನದಲ್ಲಿ ಶಿಲ್ಪಿಗಳು ಹಾವೇರಿ ಮಾದರಿಯಲ್ಲಿ ಚೌಡಯ್ಯ ಮೂರ್ತಿ ಸ್ಥಾಪನೆಗೆ ಸಂಪೂರ್ಣ ಗೋಪುರ ನಿರ್ಮಾಣ ಮಾಡಿಕೊಡಲಾಗುವುದು. ಎಂದು ಒಪ್ಪಿಕೊಂಡ ಹಿನ್ನೆಯಲ್ಲಿ ಉಮೇಶ ಮುದ್ನಾಳ ಮತ್ತು ತಾತಳಗೇರಾ ಗ್ರಾಮಸ್ಥರಿಂದ ವಿಶೇಷ ಸನ್ಮಾನಿಸಲಾಯಿತು.
ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿಹೆಚ್ಚು ಜನಸಂಖ್ಯೆ ಕಡುಬಡವರಿದ್ದು ಅರ್ಜಿ ಸಲ್ಲಿಸಿದರೂ ಸಾಲ ಸೌಲಭ್ಯ ಸಿಗದೇ ಇರುವುದರಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದರೆ ಎಲ್ಲರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣಿಗಳಿಗೆ ಸಮಾಜ ನೆನಪಾಗುತ್ತದೆ ಆದರೆ ಚುನಾವಣೆ ನಂತರ ಸೌಲಭ್ಯ ಕೊಡಿಸುವ ಕಾಳಜಿ ಇಲ್ಲವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಸೇನಪ್ಪ, ಶರಣಪ್ಪ, ಭೀಮಶಪ್ಪ ನಾಗಪ್ಪ ಮರೆಪ್ಪ ಮಲ್ಲಪ್ಪ ಮಹೇಂದ್ರ ಸಾಬಣ್ಣ ದುರ್ಗಪ್ಪ ಶಂಕರಪ್ಪ ಅನಚಿತಪ್ಪ ಸಾಬಣ್ಣ ಶಿವಪ್ಪ ನಾಗಪ್ಪ ಮಲ್ಲೇಶಪ್ಪ ದೇವಪ್ಪ ಆಶಪ್ಪ ಹಣಮಂತ ಕಾಶಪ್ಪ, ಮಲ್ಲು, ಭೀಮು, ಸೋಮಪ್ಪ, ಮಲ್ಲಪ್ಪ, ಕಾಶಪ್ಪ, ಮಲ್ಲಿಕಾರ್ಜುನ ಅನಚಿತರಡ್ಡಿ ನಾಗರಡ್ಡಿ ಜಲಾಲಸಾಬ ಸೇರಿದಂತೆ ನಿಜಶರಣ ಅಂಬಿಗರ ಚೌಡಯ್ಯನ ಸಂಘದ ಪದಾಧಿಕಾರಿಗಳು, ವಿಠಲ್ ಹೇರೂರ ಅಭಿಮಾನಿಗಳು ಉಪಸ್ಥಿತರಿದ್ದರು.