ಜಿಲ್ಲೆ

ಮೀರಾತಾಯಿ ಆರೋಗ್ಯ ವಿಚಾರಿಸಿದ ಮಹಾಲಿಂಗೇಶ್ವರ ಸ್ವಾಮೀಜಿ

ಮುಧೋಳ: ಮಹಾಲಿಂಗಪುರದ ಮಹಾಲಿಂಗೇಶ್ವರ ಮಠದ ಮಹಾಲಿಂಗೇಶ್ವರ ಸ್ವಾಮೀಜಿ ಮುಧೋಳ ಹೊರವಲಯದ ವಾತ್ಸಲ್ಯ ಧಾಮಕ್ಕೆ ಮಂಗಳವಾರ ಭೇಟಿ ನೀಡಿ ಸ್ವಾತಂತ್ರೃ ಹೋರಾಟಗಾರ್ತಿ ಗಾಂಧೀಜಿ ಮತ್ತು ವಿನೋಬಾ ಭಾವೆ ಅವರ ಅನುಯಾಯಿ ಡಾ. ಮೀರಾತಾಯಿ ಕೋಪ್ಪಿಕರ ಅವರ ಆರೋಗ್ಯ ವಿಚಾರಿಸಿದರು.

ಸ್ವಾಮೀಜಿ ಮಾತನಾಡಿ, ಮೀರಾತಾಯಿ ದೇಶಕ್ಕಾಗಿ ಸಲ್ಲಿಸಿದ ಸೇವೆ ಮತ್ತು ತ್ಯಾಗ ಬಹಳ ದೊಡ್ಡದು. ವಿನೋಬಾ ಭಾವೆ ಆರಂಭಿಸಿದ ಭೂದಾನ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಬೇಗನೆ ಗುಣಮುಖರಾಗಲಿ ಎಂದು ಹಾರೈಸಿದರು. ಆಶ್ರಮದ ವ್ಯವಸ್ಥಾಪಕ ರಮೇಶ, ಮಲ್ಲಿಕಾರ್ಜುನ ಹೆಗ್ಗಳಗಿ, ಈಶ್ವರ ಮಠದ, ಬಾಷಾಸಾಬ ನದಾಫ್ ಮತ್ತು ವಿಶ್ವನಾಥ ಖಟಾವಕರ ಉಪಸ್ಥಿತರಿದ್ದರು.