Mudhol Sub-Registrar Office Relocation  
ಜಿಲ್ಲೆ

ಮುಧೋಳ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರ

Vijayapura - Desk - Doddanagouda Gudihindin

ಮುಧೋಳ: ಪಟ್ಟಣದ ಹಳೆಯ ತಹಸೀಲ್ದಾರ್ ಕಚೇರಿಯ ಕಟ್ಟಡದಲ್ಲಿಯೇ ಸಬ್ ರಿಜಿಸ್ಟ್ರಾರ್ ಕಚೇರಿ ಕಾರ್ಯನಿರ್ವಹಿಸಲಿದೆ. 13 ಬಾಂಡ್ ರೈಟರ್‌ಗಳ ಸ್ಟಾಲ್ ತೆರೆಯಲಾಗಿದೆ. ಇನ್ಮುಂದೆ ಆಸ್ತಿ ಖರೀದಿ ಮತ್ತು ಮಾರಾಟ ದಾಖಲೆ ತಯಾರಿಗೆ ಇದೇ ಸ್ಥಳಕ್ಕೆ ಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ನಗರದ ಇಂದಿರಾ ಕ್ಯಾಂಟೀನ್ ಹತ್ತಿರದ ಹಳೆಯ ಸರ್ಕಾರಿ ಆಸ್ಪತ್ರೆಯ ಕಟ್ಟಡದಲ್ಲಿದ್ದ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಸೋಮವಾರ ಹಳೆಯ ತಹಸೀಲ್ದಾರ್ ಕಚೇರಿ ಕಟ್ಟಡಕ್ಕೆ ಸ್ಥಳಾಂತರಿಸಿ, ಬಾಂಡ್ ರೈಟರ್‌ಗಳ ಸ್ಟಾಲ್ ಹಾಗೂ ಶಾಸಕರ ಸಂಪರ್ಕ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ನೋಂದಣಿ ಅಧಿಕಾರಿ ಶಂಕರ ನ್ಯಾಮಗೌಡ, ಮುಧೋಳ ಉಪನೋಂದಣಿ ಅಧಿಕಾರಿ ವಿಠ್ಠಲ ಮಾದರ, ಜಿಪಂ ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಸಿಬ್ಬಂದಿ ವಿಶ್ವನಾಥ ಕಿಲ್ಲೆದಾರ, ಶಿವಾನಂದ ವಳಕೇರಿ, ವಿಜಯಾ ಮಲಘಾಣ, ಶಿವಾಜಿ ಹೊಸಮನಿ, ದೇವೇಂದ್ರ ಸುತಾರ, ಬಾಂಡ್ ರೈಟರ್‌ಗಳಾದ ಪ್ರಕಾಶ ಅನೆಪ್ಪನವರ, ಪಂಚಪ್ಪ ನೆವಣಕ್ಕಿ, ಗಿರೀಶ ಮೇತ್ರಿ, ಭೀಮಶಿ ಹುನ್ನೂರ, ಪ್ರಶಾಂತ ಪುರಾಣಿಕಮಠ, ಶೇಖರ ಕುಳಲಿ, ಮುರಿಗೆಪ್ಪ ಅಂಗಡಿ, ಚಿಕ್ಕಯ್ಯ ಪುರಾಣಿಕಮಠ, ಲಕ್ಷ್ಮಣ ಬೀಳಗಿ, ರವಿ ಹೊರಟ್ಟಿ ಇದ್ದರು.