ಜಿಲ್ಲೆ

ಮುದಗಲ್‌ನಲ್ಲಿ ಉರುಸು ಆಚರಣೆ ಅದ್ದೂರಿ

ಪ್ರವೀಣ ಉದುಸಾ ದಲಬಂಜನ್

ಮುದಗಲ್: ಪಟ್ಟಣದ ಹಳೇಪೇಟೆ ರಸ್ತೆಯ ಹಜರತ್ ಸೈಯದ್ ಶಾ ಮುರ್ತುಜಾ ಖಾದ್ರಿ ಹುಸೇನಿ ರಹೇಮತುಲ್ಲಾ ಅಲೈ ಅವರ ಉರುಸು ಬುಧವಾರ ಸಂಭ್ರಮದಿಂದ ಜರುಗಿತು.

ಗಂಧದ ಮೆರವಣಿಗೆಯನ್ನು ಹುಸೇನಿಯ ಮಸೀದಿಯಿಂದ ಆರಂಭಿಸಲಾಯಿತು. ನಂತರ ದೇವರ ನಾಮಸ್ಮರಣೆಯೊಂದಿಗೆ ಹಜರತ್ ಅವರ ದರ್ಗಾಕ್ಕೆ ತಲುಪಿತು. ಸೈಯದ್ ಮುನ್ನಿರ್ ಪಾಷಾ ಖಾದ್ರಿ , ಸೈಯದ್ ತಾಜುದ್ದೀನ್ ಹುಸೇನಿ, ಸೈಯದ್ ಆಬಿದ್ ಹುಸೇನಿ, ಸೈಯದ್ ಸಿರಾಜ್ ಹುಸೇನಿ, ಸೈಯದ್ ಪಾಷಾ ಹುಸೇನಿ ಅವರ ನೇತೃತ್ವದಲ್ಲಿ ಗಂಧದ ಲೇಪನ ಕಾರ್ಯಕ್ರಮ ಜರುಗಿತು.

ಹಜರತ್ ಸೈಯದ್ ಶಾ ಮುರ್ತುಜಾ ಖಾದ್ರಿ ಹುಸೇನಿ ರಹೇಮತುಲ್ಲಾ ಅಲೈ ಅವರ ದರ್ಗಾದಲ್ಲಿ ಕುರಾನ್ ಪಠನಾ ಮತ್ತು ವಿಶೇಷ ಪಾತೇಹಾ ಕಾರ್ಯಕ್ರಮ ನಡೆಯಿತು. ದರ್ಗಾದಲ್ಲಿ ಅನ್ನಸಂತರ್ಪಣೆ ನಡೆಯಿತು. ಸೈಯದ್ ಹಬೀಬ್ ಖಾದ್ರಿ ರಾಯಚೂರು, ಬಂದೆನವಾಜ್ ಬಡಿಗೇರ್, ದೂಲಿಸಾಬ್ ಬಡಿಗೇರ್, ಮೌಲಾನ ಜಾಫರ್, ಎಸ್.ಎಂ.ಖಾದ್ರಿ ಸಿಂಧನೂರು ಶಾಹಬಾಜ್, ಮುದ್ದಾಸೀರ್ ಇತರರಿದ್ದರು.