ಮುದಗಲ್ ಸಮೀಪದ ಹಡಗಲಿ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ತಲೇಖಾನ್ ಗ್ರಾಪಂ ಅಧ್ಯಕ್ಷೆ ಉಮ್ಮವ್ವ ರಾಠೋಡ ಉದ್ಘಾಟಿಸಿದರು. ಗ್ರಾಪಂ ಸದಸ್ಯರಾದ ದುರುಗಪ್ಪ ಕಟ್ಟಿಮನಿ, ಮೌನೇಶ ರಾಠೋಡ, ಶರಣಪ್ಪ ತುಗ್ಗಲಿ ಇದ್ದರು. 
ಜಿಲ್ಲೆ

ಶಿಕ್ಷಕರ ವರ್ಗಾವಣೆಯಿಂದ ಮಕ್ಕಳಿಗೆ ಸಮಸ್ಯೆ

ಶ್ರೀನಾಥ

ಮುದಗಲ್: ತಲೇಖಾನ್ ಸಿಆರ್‌ಸಿ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಗ್ರಾಮೀಣ ಮಕ್ಕಳ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ಅಲ್ಲದೆ ಈಗಿರುವ ಶಿಕ್ಷಕರ ಮೇಲೆ ಒತ್ತಡ ಹೆಚ್ಚಿದೆ ಎಂದು ತಾಪಂ ಕೆಡಿಪಿ ಸದಸ್ಯ ದೇವಪ್ಪ ರಾಠೋಡ ಹೇಳಿದರು.

ಸಮೀಪದ ಹಡಗಲಿ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿವೆ. ಆದರೆ, ಶಿಕ್ಷಕರ ವರ್ಗಾವಣೆಯಿಂದ ಇಲ್ಲಿನ ಬಹುತೇಕ ಶಿಕ್ಷಕರು ಸ್ವಂತ ತಾಲೂಕುಗಳಿಗೆ ಹೋಗಿದ್ದಾರೆ. ಸರ್ಕಾರ ಉತ್ತಮವಾದಂತಹ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಅದರಲ್ಲಿ ಕಲಿಕಾ ಹಬ್ಬವೂ ಒಂದಾಗಿದೆ. ಆದರೆ, ಮಕ್ಕಳಿಗೆ ಕಲಿಸಲು ಶಿಕ್ಷಕರಿಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಲೇಖಾನ್ ಗ್ರಾಪಂ ಅಧ್ಯಕ್ಷೆ ಉಮ್ಮವ್ವ ರಾಠೋಡ, ಎಸ್ಡಿಎಂಸಿ ಅಧ್ಯಕ್ಷ ಮಹಾಂತೇಶ, ಸಿಆರ್‌ಸಿ ಶರಣಪ್ಪ ಮಾದರ, ಮುಖ್ಯಶಿಕ್ಷಕಿ ಅನಿತಾ ಗೋಪಾಲ್, ಪ್ರಮುಖರಾದ ಬಸನಗೌಡ ಮಾಲಿಪಾಟೀಲ್, ಮುದ್ದಪ್ಪ ಇತರರಿದ್ದರು.