ಮುದಗಲ್ ಹೊರವಲಯದಲ್ಲಿರುವ ಸುಬ್ರಹ್ಮಣ್ಯ ಮೂರ್ತಿಯನ್ನು ದುಷ್ಕರ್ಮಿಗಳು ಶುಕ್ರವಾರ ರಾತ್ರಿ ಧ್ವಂಸಗೊಳಿಸಿದ್ದಾರೆ.  
ಜಿಲ್ಲೆ

ಸುಬ್ರಮಣ್ಯ ಸ್ವಾಮಿ ಮೂರ್ತಿ ಧ್ವಂಸ

Raichur

ಮುದಗಲ್: ಪಟ್ಟಣ ಹೊರಭಾಗದ ಡೈಮಂಡ್ ಡಾಬಾ ಬಳಿಯಿದ್ದ ಸುಬ್ರಹ್ಮಣ್ಯ ಸ್ವಾಮಿ (ನಾಗ) ಮೂರ್ತಿಯನ್ನು ದುಷ್ಕರ್ಮಿಗಳು ಶುಕ್ರವಾರ ರಾತ್ರಿ ಧ್ವಂಸ ಮಾಡಿದ್ದಾರೆ. ಐದು ವರ್ಷದ ಹಿಂದೆ ಭಕ್ತರು ಪ್ರತಿಷ್ಠಾಪಿಸಿದ್ದ ಕಪ್ಪು ಶಿಲೆಯ ಮೂರ್ತಿಯನ್ನು ದುಷ್ಕರ್ಮಿಗಳು ಕಿತ್ತು ಹಾಕಿದ್ದು ಕಳ್ಳತನಕ್ಕೆ ಯತ್ನ ಮಾಡಿದ್ದಾರೆ. ಆದರೆ ಮೂರ್ತಿ ಹೆಚ್ಚು ಭಾರವಿದ್ದ ಕಾರಣ ಹೊತ್ತೊಯ್ಯಲಾಗದೆ ಪೀಠದಿಂದ ಕೆಳಗೆ ಬೀಳಿಸಿ ಧ್ವಂಸ ಮಾಡಿರಬಹುದೆಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.