ಮುದಗಲ್ ಆರೋಮ ಪದವಿ ಪೂರ್ವ ಕಾಲೇಜ್‌ನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಜಯಗೊಳಿಸಿ ಪದಕ ಹಾಗೂ ಪ್ರಮಾಣಪತ್ರ ಪಡೆದಿರುವುದು. ನೀತಾ ಭಮಸಾಗರ, ಪ್ರಾಚಾರ್ಯ ಸಲೀಂ ಸಾಬ್, ದೈಹಿಕ ಶಿಕ್ಷಕ ಖಾಜಾ ಹುಸೇನ್ ಹಾಗೂ ಕಾಲೇಜ್ ಉಪನ್ಯಾಸಕರು ಇದ್ದರು.  
ಜಿಲ್ಲೆ

ವಿವಿಧ ಕ್ರೀಡೆಯಲ್ಲಿ ರಾಜಮಟ್ಟಕ್ಕೆ ಆಯ್ಕೆ

ಮುದಗಲ್: ಪಟ್ಟಣದ ಆರೋಮ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ಜಿಲ್ಲಾಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಸಂಸ್ಥೆ ಕಾರ್ಯದರ್ಶಿ ಡಾ.ಸಂಜೀವ ಭಮಸಾಗರ ತಿಳಿಸಿದರು.

ಎತ್ತರ ಜಿಗಿತದಲ್ಲಿ ಸುನೀತಾ (ಪ್ರಥಮ), ಜಾವೆಲಿನ್ ಥ್ರೋನಲ್ಲಿ ಸ್ನೇಹಾ(ಪ್ರಥಮ), ಚೆಸ್‌ನಲ್ಲಿ ಅಪ್ಸಾನ ಹಾಗೂ ಸ್ನೇಹಾ (ಪ್ರಥಮ), 800 ಮೀಟರ್ ಓಟದಲ್ಲಿ ಸಾಹಿತ್ಯಾ (ಪ್ರಥಮ), ರೆಹಮನ ಅಸ್ರ (ತೃತೀಯ), ಉದ್ದ ಜಿಗಿತದಲ್ಲಿ ಸುನೀತಾ (ತೃತೀಯ) ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.