ಮುದಗಲ್‌ನಲ್ಲಿ ಸುರಕ್ಷತಾ ನಿಯಮ ಪಾಲಿಸದ ಬೀದಿ ಬದಿ ವ್ಯಾಪಾರಸ್ಥರಿಗೆ ನಿಯಮ ಪಾಲಿಸುವಂತೆ ಎಎಸ್‌ಐ ವೆಂಕಟಪ್ಪ ನಾಯಕ ತಿಳಿ ಹೇಳಿ ನೋಟಿಸ್ ಜಾರಿ ಮಾಡಿದರು. ಸಿಬ್ಬಂದಿ ಅನಿಲ್, ರುದ್ರಗೌಡ ಇದ್ದರು. 
ಜಿಲ್ಲೆ

ನಿಯಮ ಪಾಲಿಸದವರಿಗೆ ನೋಟಿಸ್

ಮುದಗಲ್: ಸುರಕ್ಷತಾ ನಿಯಮ ಪಾಲಿಸದ ಬೀದಿಬದಿ ವ್ಯಾಪಾರಸ್ಥರು, ಬೈಕ್ ಸವಾರರಿಗೆ ಪಿಎಸ್‌ಐ ವೆಂಕಟೇಶ್ ಮಾಡಗೇರಿ ನೇತೃತ್ವದಲ್ಲಿ ಬುಧವಾರ ರಾತ್ರಿ ತಿಳಿಹೇಳಿ, ನೋಟಿಸ್ ನೀಡಲಾಯಿತು.

ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿ ಬೈಕ್ ನಿಲ್ಲಿಸುವುದು, ಎಲ್ಲೆಂದರಲ್ಲಿ ಅಂಗಡಿ ಹಾಕಿಕೊಳ್ಳುವುದರಿಂದ ಜನ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಸಾರ್ವಜನಿಕರಿಗೆ ಕಿರಿಕಿರಿ ಆಗುವ ರೀತಿಯಲ್ಲಿ ವಾಹನ ನಿಲ್ಲಿಸಬಾರದೆಂದು ಸೂಚಿಸಲಾಯಿತು. ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಆಗುತ್ತಿರುವ ಬೆನ್ನಲ್ಲೇ ಪೊಲೀಸ್ ಇಲಾಖೆ ಈ ರೀತಿ ಕ್ರಮಕ್ಕೆ ಮುಂದಾಗಿದೆ.