ಮುದಗಲ್ ಸಮೀಪದ ಮರಳಿಯಲ್ಲಿ ಸೋಮವಾರ ಮನೆಯ ಛಾವಣಿ ಬಿದ್ದು ಗಾಯಗೊಂಡಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದು.  
ಜಿಲ್ಲೆ

ಮನೆ ಬಿದ್ದು ಮಹಿಳೆಗೆ ಗಾಯ

ಮುದಗಲ್: ಮರಳಿಯಲ್ಲಿ ಸೋಮವಾರ ಮನೆಯ ಛಾವಣಿ ಬಿದ್ದು ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಳೆಯಿಂದ ಮನೆಯ ಗೋಡೆ ಮತ್ತು ಛಾವಣಿ ಕುಸಿದಿದೆ. ಗಾಯಾಳು ಅಂಬಮ್ಮ ಲಕ್ಷ್ಮಣಗೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ರಾಯಚೂರಿಗೆ ಕಳುಹಿಸಲಾಗಿದೆ. ಕನ್ನಾಪುರಹಟ್ಟಿಯಲ್ಲಿ ಯಂಕಪ್ಪ ಮೇಗೂರು ಎನ್ನುವವರ ಮನೆಯ ಗೋಡೆ ಸೋಮವಾರ ಕುಸಿದಿದೆ. ಮನೆಯಲ್ಲಿದ್ದವರು ಗಾಬರಿಯಾಗಿ ಹೊರ ಬಂದಿದ್ದಾರೆ.