ಮುದಗಲ್‌ನಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಪಟ್ಟಣದಲ್ಲಿ ಪಥ ಸಂಚಲನ ನಡೆಸಿದರು. 
ಜಿಲ್ಲೆ

ಮುದಗಲ್‌ನಲ್ಲಿ ಪೊಲೀಸ್ ಪಥ ಸಂಚಲನ

Kopala - Desk - Eraveni

ಮುದಗಲ್: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ನೂರಾರು ಸಿಬ್ಬಂದಿ ನೇತೃತ್ವದಲ್ಲಿ ಪಥ ಸಂಚಲನ ಶುಕ್ರವಾರ ನಡೆಸಿದರು.

ಸ್ಥಳೀಯ ಪೊಲೀಸರು ಹಾಗೂ ಸಿಆರ್‌ಪಿಎಫ್ ಪಡೆಯ 30ಕ್ಕೂ ಹೆಚ್ಚು ಮಂದಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು,

ಗಡಿಗಳಲ್ಲಿ ತಪಾಸಣೆ ಮತ ಕೇಂದ್ರಗಳಲ್ಲಿ ಭದ್ರತೆ ಮುಂತಾದ ವಿಭಾಗದಲ್ಲಿ ಪೊಲೀಸ್ ಇಲಾಖೆ, ಕೇಂದ್ರ ಮೀಸಲು ಪಡೆಯ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದೆ ಎಂದು ಪಿಎಸೈ.ಸದ್ದಾಂ ಹುಸೇನ್ ತಿಳಿಸಿದರು. ಸಿಬ್ಬಂದಿ ಅಮರೇಶ, ಮಂಜುನಾಥ, ವೆಂಕಟೇಶ, ಹನುಮಂತ, ಅಡಿವಿಯಪ್ಪ, ರಂಗಪ್ಪ ಇತರರಿದ್ದರು.