ಮುದಗಲ್: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಳವಾಗುತಿದು, ಜನರು ತಂಪು ಪಾನಿಯಗಳಿಗೆ ಮೊರೆ ಹೋಗುತ್ತಿದ್ದಾರೆ.
ಕಲ್ಲಂಗಡಿ ಹಾಗೂ ತಂಪು ಪಾನಿಯ ಅಂಗಡಿಗಳಲ್ಲಿ ಜನರು ಬಾಯಾರಿಕೆ ತಣಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಎಳನೀರಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದ್ದು, ಬೆಲೆ ದುಪ್ಪಟ್ಟು ಆಗಿದೆ. ಸಾಮಾನ್ಯ ದಿನಗಳಲ್ಲಿ 30 ಗೆ ಮಾರಾಟವಾಗುತ್ತಿತ್ತು. ಆದರೆ ಈಗ 60 ರೂ.ಗೆ ಮಾರಾಟವಾಗುತ್ತಿದೆ. ಬಿಸಿಲಿನ ತಾಪ 46 ಡಿಗ್ರಿ ಸೆಲ್ಸಿಯಸ್ ಕ್ಕಿಂತ ಅಧಿಕವಾಗುರುವುದು ಜನರು ಬಳಲಿ ಬೆಂಡಾಗುವಂತಾಗಿದೆ.
ಈ ಮುಂಚೆ ಮಂಡ್ಯ, ರಾಮನಗರ ಹಾಗೂ ಮದ್ದೂರುದಿಂದ ಪಟ್ಟಣಕ್ಕೆ ಬರುತ್ತಿದ್ದ ಎಳನೀರು, ಬಿಸಿಲಿನ ತಾಪಕ್ಕೆ ಇಳುವರಿ ಕೊರತೆಯಿಂದಾಗಿ ಹೆಚ್ಚಿಗೆ ಬರುತ್ತಿಲ್ಲ. ಸ್ಥಳೀಯವಾಗಿ ದೊರೆಯುವ ರೈತರಿಂದ ಎಳನೀರನ್ನು ಖರೀದಿಸಿ ಮಾರಾಟಮಾಡಲಾಗುತ್ತಿದೆ. ಬೇಸಿಗೆ ಆರಂಭವಾಗಿದ್ದು ಎಳನೀರಿಗೆ ಸಾಕಷ್ಟು ಬೇಡಿಕೆ ಇದೆ. ಆದರೆ ಇಳುವರಿ ಇಲ್ಲದೆ ಎಳನೀರಿನ ಕೊರತೆ ಆಗಿದ್ದು, ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಮಾರಾಟಗಾರರು ಹೇಳುತ್ತಿದ್ದಾರೆ.