ಮುದಗಲ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಮಹಿಳಾ ಘಟಕದಿಂದ ರಕ್ಷಾ ಬಂಧನ ಆಚರಿಸಲಾಯಿತು. ಪಿಎಸ್‌ಐ ವೆಂಕಟೇಶ ಮಾಡಗೇರಿ, ಎಎಸ್‌ಐ ವೆಂಕಟಪ್ಪ ನಾಯಕ, ಮಂಡಲ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಸತ್ಯಮ್ಮ ರಡ್ಡಿ, ಕಾರ್ಯದರ್ಶಿ ಲಕ್ಷ್ಮೀ ಕೋರಿಶೆಟ್ಟಿ, ಮುದಗಲ್ ಪಟ್ಟಣ ಘಟಕ ಅಧ್ಯಕ್ಷ ಕರಿಯಪ್ಪ ಯಾದವ್ ಇದ್ದರು. 
ಜಿಲ್ಲೆ

ಆರಕ್ಷಕರ ಸೇವೆ ದೊಡ್ಡದು

ಶ್ರೀನಾಥ

ಮುದಗಲ್: ಮಂಡಲ ಬಿಜೆಪಿ ಮಹಿಳಾ ಘಟಕದ ಪದಾಧಿಕಾರಿಗಳು ಶನಿವಾರ ರಕ್ಷಾಬಂಧನ ಅಂಗವಾಗಿ ಪಟ್ಟಣದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಹಾಗೂ ಪತ್ರಕರ್ತರಿಗೆ ರಾಖಿ ಕಟ್ಟಿ ರಕ್ಷಬಂಧನ ಶುಭ ಕೋರಿದರು.

ರಕ್ಷಾ ಬಂಧನದ ನಿಮಿತ್ತ ಕಾಣಿಕೆಯನ್ನು ಪಡೆಯದೇ, ನೀವು ನಾಗರಿಕರಿಗೆ ರಕ್ಷಣೆ ನೀಡುತ್ತಿರುವುದೇ ನಮಗೆ ದೊಡ್ಡ ಕಾಣಿಕೆಯಾಗಿದೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಬಿಜೆಪಿ ಮಹಿಳಾ ಪದಾಧಿಕಾರಿಗಳು ಕೋರಿದರು.

ಪ್ರಮುಖರಾದ ನಿರ್ಮಲಾ, ಬಸಮ್ಮ ಕುಂಬಾರ, ರುದ್ರಮ್ಮ, ಕುಸುಮಾ, ರಾಚಮ್ಮ, ಪದ್ದಮ್ಮ, ಸಣ್ಣ ಸಿದ್ದಯ್ಯಸ್ವಾಮಿ, ನಾಗರಾಜ ತಳವಾರ, ನಾಗರಾಜ ಉಪ್ಪಾರ, ರಮೇಶ, ಶರಣಪ್ಪ ಹಂಚಿನಾಳ, ರಾಚಪ್ಪ ಗುಡೂರ ಸೇರಿ ಇತರರಿದ್ದರು.