ಜಿಲ್ಲೆ

ಮಾಕಾಪುರದ ಪಶು ಆಸ್ಪತ್ರೆ ಕಟ್ಟಡಕ್ಕೆ 43 ಲಕ್ಷ ರೂ. ಮಂಜೂರು ಆಗಿದೆ ಎಂದ ಶಾಸಕ ಡಿ.ಎಸ್.ಹೂಲಗೇರಿ

ಮುದಗಲ್: ಮಾಕಾಪುರದಲ್ಲಿ ಪಶು ವೈದ್ಯಕೀಯ ನೂತನ ಕಟ್ಟಡದ ಕಾಮಗಾರಿಗೆ ಶಾಸಕ ಡಿ.ಎಸ್.ಹೂಲಗೇರಿ ಭಾನುವಾರ ಭೂಮಿ ಪೂಜೆ ನೆರವೇರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019-20 ನೇ ಸಾಲಿನ ಆರ್.ಐ.ಡಿ.ಎಫ್-25ರ ಯೋಜನೆಯಡಿ ತಾಲೂಕಿಗೆ 1.72 ಕೋಟಿ ರೂ. ಬಿಡುಗಡೆ ಆಗಿದೆ. ಅದರಲ್ಲಿ ಆಮದಿಹಾಳ, ಮಾವಿನ ಬಾವಿ, ಲಿಂಗಸುಗೂರಿನಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಮಾಕಾಪುರದ ಪಶು ಆಸ್ಪತ್ರೆ ಕಟ್ಟಡಕ್ಕೆ 43 ಲಕ್ಷ ರೂ. ಮಂಜೂರಾಗಿದೆ. ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಗುತ್ತಿಗೆ ಪಡೆದ ಎನ್‌ಪಿಸಿಸಿಎಲ್ ಸಂಸ್ಥೆಗೆ ಸೂಚಿಸಲಾಗಿದೆ ಎಂದರು.

ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೇಖ ದಾವೂದ್ ಸಾಬ, ತಾಪಂ ಮಾಜಿ ಅಧ್ಯಕ್ಷ ರುದ್ರಗೌಡ ತುರಡಗಿ, ಪ್ರಮುಖರಾದ ನಾಗನಗೌಡ ಯರದಿಹಾಳ, ಯಲ್ಲಪ್ಪ ಗೌಂಡಿ, ಬಸನಗೌಡ, ಮಾತಾಡಪ್ಪ, ಈಶ್ವರಪ್ಪ, ಸಿದ್ದು ಮಾಕಾಪುರು, ರಘುವೀರ ಚಲುವಾದಿ, ವೀರಪಣ್ಣ ಛತ್ತರ್, ವೆಂಕಟೇಶ್, ವೀರೇಶ ಇತರರು ಇದ್ದರು.