ಮುದಗಲ್‌ನ ಪದ್ಮಾವತಿ ರಾಘವೇಂದ್ರ ದೇಶಪಾಂಡೆ ಸರ್ಕಾರಿ ಪದವಿ ಕಾಲೇಜ್ ಆವರಣದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಾಸಕ ಮಾನಪ್ಪ ವಜ್ಜಲ್ ಶನಿವಾರ ಚಾಲನೆ ನೀಡಿದರು. ಕಾಲೇಜ್ ಅಭಿವೃದ್ದಿ ಕಮಿಟಿ ಗೌರವ ಅಧ್ಯಕ್ಷ ಡಾ.ಗುರುರಾಜ ದೇಶಪಾಂಡೆ, ಬಿಜೆಪಿ ಮುದಗಲ್ ಮಂಡಲ ಅಧ್ಯಕ್ಷ ಸಣ್ಣ ಸಿದ್ದಯ್ಯ, ಪ್ರಾಚಾರ್ಯ ಸಿದ್ದರಾಮಪ್ಪ, ಕ್ಯಾಷುಟೆಕ್ ನಿರ್ಮಿತಿ ಕೇಂದ್ರದ ಸಹಾಯಕ ಇಂಜಿನಿಯರ್ ತಿಮ್ಮಣ್ಣ ಮೇಲಸಕ್ರಿ, ಪುರಸಭೆ ಮುಖ್ಯಾಧಿಕಾರಿ ನಬಿಸಾಬ ಕಂದಗಲ್,ಗುರು ಬಸಪ್ಪ ಸಜ್ಜನ್ ಇದ್ದರು. 
ಜಿಲ್ಲೆ

ಶಿಕ್ಷಣ, ಮೂಲ ಸೌಕರ್ಯಕ್ಕೆ ಆದ್ಯತೆ

ಪ್ರವೀಣ ಉದುಸಾ ದಲಬಂಜನ್

ಮುದಗಲ್: ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳಿಗೆ ಕೊಠಡಿ ನಿರ್ಮಾಣ ಮತ್ತು ಅಗತ್ಯ ಸೌಕರ್ಯ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.

ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿ

ಪಟ್ಟಣದ ಪದ್ಮಾವತಿ ರಾಘವೇಂದ್ರ ದೇಶಪಾಂಡೆ ಸರ್ಕಾರಿ ಪದವಿ ಕಾಲೇಜ್ ಆವರಣದಲ್ಲಿ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಇದನ್ನೂ ಓದಿ:

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಯೋಜನೆ ಅಡಿ 1.28 ಕೋಟಿ ರೂ. ವೆಚ್ಚದಲ್ಲಿ ಕಾಲೇಜ್ ಆವರಣದಲ್ಲಿ ಆರು ಕೊಠಡಿಗಳು ನಿರ್ಮಿಸಲಾಗುತ್ತಿದೆ. ನಿರ್ಮಾಣ ಕಾರ್ಯವನ್ನು ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ವಹಿಸಿಕೊಂಡಿದೆ. ನಿಗದಿತ ಸಮಯದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ಮಾಡುವ ಮೂಲಕ ಸರ್ಕಾರದ ಅನುದಾನ ಸದ್ಬಳಕೆ ಮಾಡಬೇಕು ಎಂದರು.

ಗ್ರಾಮೀಣ ರಸ್ತೆಗಳು ದುರಸ್ತಿ ಕಾಣದೆ ಹೆದಗೆಟ್ಟಿವೆ. ಮತ್ತೊಂದುಕಡೆ ಕುಡಿವ ನೀರಿನ ಸಮಸ್ಯೆ ಇದ್ದು, ಸರ್ಕಾರದಿಂದ ಇನ್ನು ಅನುದಾನ ಬಾರದಿರುವದು ಅಭಿವೃದ್ದಿ ಕಾಮಗಾರಿಗೆ ಹಿನ್ನೆಡೆಯಾಗಿದೆ. ಆದರೆ ಕೆಕೆಐಡಿ ಯೋಜನೆಯ ಅನುದಾನದಲ್ಲಿ ನಾಗರಿಕ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು. ಮುದಗಲ್ ಕೋಟೆ ಹಿತ ರಕ್ಷಣ ಸಮಿತಿ ಅಧ್ಯಕ್ಷ ಗುರುಬಸಪ್ಪ ಸಜ್ಜನ್ ಮಾತನಾಡಿದರು.

ಕಾಲೇಜ್ ಅಭಿವೃದ್ದಿ ಕಮಿಟಿ ಗೌರವ ಅಧ್ಯಕ್ಷ ಡಾ.ಗುರುರಾಜ ದೇಶಪಾಂಡೆ, ಮುದಗಲ್ ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಸಿದ್ದಯ್ಯ, ಪ್ರಾಚಾರ್ಯ ಸಿದ್ದರಾಮಪ್ಪ, ಕ್ಯಾಷುಟೆಕ್ ನಿರ್ಮಿತಿ ಕೇಂದ್ರದ ಸಹಾಯಕ ಇಂಜಿನಿಯರ್ ತಿಮ್ಮಣ್ಣ ಮೇಲಸಕ್ರಿ, ಪುರಸಭೆ ಮುಖ್ಯಾಧಿಕಾರಿ ನಬಿಸಾಬ ಕಂದಗಲ್, ಪ್ರಮುಖರಾದ ಹುಲ್ಲೇಶ ಸಾಹುಕಾರ, ಗಿರಿಮಲ್ಲನಗೌಡ, ಮಲ್ಲಪ್ಪ ಹೂಗಾರ, ರುದ್ರಗೌಡ ತುರಡಗಿ, ಮಲ್ಲಪ್ಪ ಮಾಟೂರು,ಅಯ್ಯಪ್ಪಯ್ಯ, ಚಂದಾವಲಿ ಸಾಬ, ನಾಗರಾಜ ತಳವಾರ, ಚನ್ನಬಸವ ಕಿಡದೂರು ಸೇರಿದಂತೆ ಇನ್ನಿತರರು ಇದ್ದರು.