ಮುದಗಲ್: ಸಮೀಪದ ಕನ್ನಾಪುರಹಟ್ಟಿಯ ನಾಗರಹಾಳ ರಸ್ತೆ ಪಕ್ಕದಲ್ಲಿರುವ ಶ್ರೀ ಸಂಗಮೇಶ್ವರ ಜಾತ್ರೆ ಶ್ರಾವಣ ಮಾಸದ ಮೊದಲ ಸೋಮವಾರ ಸಂಭ್ರಮದಿಂದ ಜರುಗಿತು. ಬೆಳಗ್ಗೆ ಶ್ರೀಸಂಗಮೇಶ್ವರ ಮೂರ್ತಿಗೆ ಅಭಿಷೇಕ, ಬಿಲ್ವಾರ್ಚನೆ ಮಾಡಲಾಯಿತು.
ಇದನ್ನೂ ಓದಿ: ದೇವಸ್ಥಾನ, ದೈವಸ್ಥಾನ ಜಾತ್ರೆಗಳಲ್ಲಿ ಹಿಂದುಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ: ಜಿಲ್ಲಾಡಳಿತಕ್ಕೆ ಸಂಘದ ಮನವಿ
ಕನ್ನಾಪುರಹಟ್ಟಿ ಶ್ರೀ ಮಾರುತೇಶ್ವರ ದೇವಸ್ಥಾನದಿಂದ ವಾಧ್ಯ ಮೇಳದೊಂದಿಗೆ ಕಳಶ ಮೆರವಣಿಗೆ, ನಂತರ ಭಕ್ತರಿಗೆ ಮಹಾ ಪ್ರಸಾದ ನೆರವೇರಿಸಲಾಯಿತು. ಅನೇಕ ಭಕ್ತಾಧಿಗಳು ಧಾರ್ಮಿಕ ಪೂಜೆ, ಹರಕೆ ಸಲ್ಲಿಸಿದರು.
ಕುಷ್ಟಗಿ ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರು, ಸಿದ್ದನಗೌಡ ಬಯ್ಯಪುರು, ಸುರೇಶಗೌಡ ಆದಾಪುರು, ಶರಣಪ್ಪ ಮೇಟಿ, ನಾಗನಗೌಡ ತುರಡಗಿ, ಬಸವರಾಜಗೌಡ ಗಣೆಕಲ್, ಶರಣಬಸವರಾಜ ವ್ಯಾಕರನಾಳ, ಮಲ್ಲನಗೌಡ, ಹನುಮನಗೌಡ, ಜೋಸೇಫ್ ಈರ್ಲಾ, ಅಶೊಕಗೌಡ ಪಾಟಿಲ್, ರಾಘವೇಂದ್ರ ದೇಶಪಾಂಡೆ, ಅನಿಲ ಬುಶೆಟ್ಟಿ ಇದ್ದರು.