ಜಿಲ್ಲೆ

ಹಾಲಭಾವಿ ವೀರಭದ್ರೇಶ್ವರ ಕಾರ್ತಿಕ ದೀಪೋತ್ಸವ

ಪ್ರವೀಣ ಉದುಸಾ ದಲಬಂಜನ್

ಮುದಗಲ್: ಪಟ್ಟಣದ ಹೊರವಲಯದ ಹಾಲಭಾವಿ ವೀರಭದ್ರೇಶ್ವರ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವು ಬುಧವಾರ ಸಂಜೆ ಶ್ರದ್ಧಾಭಕ್ತಿಯಿಂದ ಜರುಗಿತು.

ವೀರಭದ್ರೇಶ್ವರ ದೇವರ ಮೂರ್ತಿಗೆ ಬೆಳಗ್ಗೆ ರುದ್ರಾಭಿಷೇಕ ವಿಶೇಷ ಪೂಜೆ ಹೂವಿನ ಅಲಂಕಾರ ಹಾಗೂ ಧಾರ್ಮಿಕ ಸಂಪ್ರದಾಯಗಳು ನೆರವೇರಿದವು. ದೇಗುಲದ ಪ್ರಧಾನ ಅರ್ಚಕರಾದ ಸಿದ್ದಯ್ಯ ಸಾಲಿಮಠ ನೇತೃತ್ವದಲ್ಲಿ ಸಂಜೆ ಕಾರ್ತಿಕ ದೀಪೋತ್ಸವ ನಡೆಯಿತು.

ಪ್ರಮುಖರಾದ ವೀರಭದ್ರಯ್ಯ ಸರಗಣಾಚಾರಿ, ಸಂಗಪ್ಪ ಕೊಡೇಕಲ್, ವಿರುಪಾಕ್ಷಪ್ಪ ಸಜ್ಜನ್, ನೀಲಕಂಠಪ್ಪ ರುಮಾಲದ ಇತರರಿದ್ದರು