ಮುದಗಲ್‌ನ ಹಜರತ್ ಹುಸೇನಿ ಆಲಂ ದರ್ಗಾಕ್ಕೆ ಶುಕ್ರವಾರ ವಿಧಾನ ಪರಿಷತ್ ಮುಖ್ಯಸಚೇತಕ ಸಲೀಂ ಅಹ್ಮದ್ ಭೇಟಿ ನೀಡಿ ದರ್ಶನ ಪಡೆದರು. ದರ್ಗಾ ಸಮಿತಿ ಅಧ್ಯಕ್ಷ ಅಮೀರಬೇಗ್ ಉಸ್ತಾದ್, ಕಾರ್ಯದರ್ಶಿ ಸಾದಿಕ್ ಅಲಿ, ಪುರಸಭೆ ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್, ಸದಸ್ಯ ಎಸ್.ಆರ್.ರಸೂಲ್, ಸೈಯದ್ ನ್ಯಾಮತ್ ಖಾದ್ರಿ, ಮುಫ್ತಿ ಹೈಮದ್ ಮೌಲಾನಾ ಇತರರಿದ್ದರು. 
ಜಿಲ್ಲೆ

ಮುದಗಲ್‌ ದರ್ಗಾಕ್ಕೆ ವಿಪ ಮುಖ್ಯ ಸಚೇತಕ ಸಲೀಂ ಅಹ್ಮದ್ ಭೇಟಿ

ಮುದಗಲ್: ಯಾವ ಧರ್ಮವನ್ನು ವಿರೋಧಿಸದೆ ಎಲ್ಲರೊಂದಿಗೆ ಪ್ರೀತಿ, ಮಮತೆ, ಸೌಹಾರ್ದದಿಂದ ಬಾಳುವುದೇ ಇಸ್ಲಾಂ ಧರ್ಮದ ಮೂಲ ಉದ್ದೇಶವಾಗಿದೆ ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಸಲೀಂ ಅಹ್ಮದ್ ಹೇಳಿದರು.

ಪಟ್ಟಣದ ಕಿಲ್ಲಾದ ಐತಿಹಾಸಿಕ ಹುಸೇನಿ ಆಲಂ ದರ್ಗಾಕ್ಕೆ ಶುಕ್ರವಾರ ಭೇಟಿ ನೀಡಿ ದರ್ಶನ ಪಡೆದ ಬಳಿಕ ಮಾತನಾಡಿದರು. ಪ್ರವಾದಿ ಮುಹಮದ್ ಪೈಗಂಬರರ 1500ನೇ ಜಯಂತಿ ಆಚರಣೆಯ ಅಂಗವಾಗಿ ಕೊಪ್ಪಳದಲ್ಲಿ ಹಮ್ಮಿಕೊಂಡ ಸಮಾವೇಶಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.

ವಿಶೇಷವಾಗಿ ಯುವಕರು ಸೇವಾ ಮನೋಭಾವನೆಯೊಂದಿಗೆ ಜನರನ್ನು ಕರೆತರಬೇಕು ಎಂದರು. ಈ ಸಂದರ್ಭದಲ್ಲಿ ಹೈದರ್‌ವಲಿವುಲ್ಲಾ ಸಾಹೇಬ್, ನಿಲಂಗ ಷರೀಫ್, ನೂರುಲ್ಲಾ ಸಾಹೇಬ್, ಖಾಜಿ ಫಾರೂಕ್, ವೆಂಕಟೇಶ, ಬಸವರಾಜ ಇತರರಿದ್ದರು.