ಮುದಗಲ್‌ನಲ್ಲಿ ನಾಡ ತಹಸೀಲ್ದಾರ್ ತುಳಜಾರಾಮ್ ಸಿಂಗ್ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪ್ರಮುಖರಾದ ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ, ಸಂತೋಷಕುಮಾರ್, ಹನುಮಂತಪ್ಪ ಆಶಿಹಾಳ, ನಾಗರಾಜ ಕಟ್ಟಿಮನಿ ಇತರರಿದ್ದರು.  
ಜಿಲ್ಲೆ

ಬಿಜೆಪಿ-ಆರ್‌ಎಸ್‌ಎಸ್ ಸಂಸ್ಕೃತಿ ಬಹಿರಂಗ

ಶಾಮಸುಂದರ್ ಕೊಪ್ಪಳಕರ್

ಮುದಗಲ್: ದೇಶದ ಗೃಹಮಂತ್ರಿ ಅಮಿತ್ ಷಾ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಇಲ್ಲಿನ ನಾಡ ತಹಸೀಲ್ದಾರ್ ತುಳಾಜಾರಾಮ್ ಸಿಂಗ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಚಳಿಗಾಲದ ಅಧಿವೇಶನದಲ್ಲಿ ಅಮಿತ್ ಷಾ ಅವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನ ಮಾಡಿದ್ದಾರೆ. ಇದು ಶೋಷಿತ ವರ್ಗಗಳಿಗೆ ತೋರಿಸುತ್ತಿರುವ ಅಗೌರವವಾಗಿದೆ. ಕೂಡಲೇ ಅವರನ್ನು ರಾಷ್ಟ್ರಪತಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಆರ್‌ಎಸ್‌ಎಸ್ ಸಂಸ್ಕೃತಿ ಸಮಾಜಕ್ಕೆ ತಿಳಿಯುತ್ತಿದೆ. ಜನಸಾಮಾನ್ಯರು ಕೂಡ ಇವರನ್ನು ಮುಂದಿನ ದಿನಮಾನಗಳಲ್ಲಿ ತಕ್ಕ ಪಾಠ ಕಲಿಸಿದ್ದಾರೆ ಎಂದು ಎಚ್ಚರಿಸಿದರು. ಪ್ರಮುಖರಾದ ಶರಣಪ್ಪ ಕಟ್ಟಿಮನಿ, ಪ್ರಮುಖರಾದ ಹನುಮಂತ ಬಡಿಗೇರ್, ಬಸವರಾಜ, ಮಹಾದೇವಪ್ಪ, ಹೊಳೆಯಪ್ಪ, ವೀರೇಶ ಇತರರಿದ್ದರು.