ಚಿಕ್ಕಯರದಿಹಾಳ ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಪುರ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೇರೆವೇರಿಸಿದರು. ಮುದಗಲ್ ಪುರಸಭೆ ಸದಸ್ಯ ಶ್ರೀಕಾಂತಗೌಡ ಪಾಟೀಲ್, ಪ್ರಮುಖರಾದ ಕೇಶವರಡ್ಡಿ, ಸುರೇಶ ಶೇಠ್, ಸಿದ್ದರಾಮೇಶ್ವರ ಪಾಗದ ಇದ್ದರು. 
ಜಿಲ್ಲೆ

ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ - ವಿ.ಪ.ಸದಸ್ಯ ಶರಣಗೌಡ ಪಾಟೀಲ್ ಬಯ್ಯಪುರ ಹೇಳಿಕೆ

ಶ್ರೀನಾಥ

ಮುದಗಲ್: ಸಮೀಪದ ಆಮದಿಹಾಳ ಮತ್ತು ಚಿಕ್ಕಯರದಿಹಾಳ ಗ್ರಾಮಗಳಲ್ಲಿ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಪುರ ಬುಧವಾರ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿದರು.

ಆಮದಿಹಾಳ ಗ್ರಾಮದ ಭಜಂತ್ರಿ ಹಾಗೂ ಹರಿಜನ ಕಾಲನಿಯಲ್ಲಿ 2024-25 ನೇ ಸಾಲಿನ ಎಸ್ಸಿಪಿ ಯೋಜನೆಯಡಿ 25 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಹಾಗೂ ಚಿಕ್ಕಯರದಿಹಾಳ ಗ್ರಾಮದ ಹರಿಜನ ಕಾಲನಿಯಲ್ಲಿ 50 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ತಾಲೂಕಿನ ಗ್ರಾಮಗಳಲ್ಲಿ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಗುತ್ತಿಗೆದಾರರಿಗೆ ಗ್ರಾಮಸ್ಥರು ಸಹಕಾರ ನೀಡಿ, ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳುವಂತೆ ಸೂಚಿಸಿದರು. ಗ್ರಾಪಂ ಸದಸ್ಯ ಗೌಡಪ್ಪ, ಗ್ರಾಪಂ ಕಾರ್ಯದರ್ಶಿ ಮಹಾದೇವಪ್ಪ ಇತರರಿದ್ದರು.