ವಿಜಯಪುರದ ಸ್ಟೇಶನ್ ರಸ್ತೆಯಲ್ಲಿರುವ ಮುದ್ದು ಮೀನು ಸಂಗ್ರಹಾಲಯ ಲೋಕಾರ್ಪಣೆಗೊಳಿಸಿ ಸಚಿವ ಎಂ.ಬಿ. ಪಾಟೀಲ ಮಾಹಿತಿ ಪಡೆದರು. ಸಿಇಒ ರಾಹುಲ್ ಶಿಂಧೆ, ಎಸ್‌ಪಿ ಎಚ್.ಡಿ.ಆನಂದಕುಮಾರ ಮತ್ತಿತರರಿದ್ದಾರೆ. 
ಜಿಲ್ಲೆ

ಮುದ್ದು ಮೀನು ಸಂಗ್ರಹಾಲಯ ಲೋಕಾರ್ಪಣೆ

Vijyapura - Parsuram Bhasagi

ವಿಜಯಪುರ: ನಗರದ ಸ್ಟೇಶನ್ ರಸ್ತೆಯಲ್ಲಿರುವ ಮೀನುಗಾರಿಕೆ ಇಲಾಖೆಯ ಪುನರ್‌ನವೀಕರಣಗೊಂಡ ಮುದ್ದು ಮೀನು ಸಂಗ್ರಹಾಲಯವನ್ನು ಸಚಿವ ಡಾ.ಎಂ.ಬಿ ಪಾಟೀಲ್ ಮಂಗಳವಾರ ಲೋಕಾರ್ಪಣೆಗೊಳಿಸಿದರು.

ಜಿಲ್ಲೆಯ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ನವೀಕರಣಗೊಂಡಿರುವ ಈ ಮುದ್ದು ಮೀನು ಸಂಗ್ರಹಾಲಯದ ಸದುಪಯೋಗ ಪಡೆದುಕೊಳ್ಳಬೇಕು. ಈ ಸಂಗ್ರಹಾಲಯ ಆಕರ್ಷಕವಾಗಿದ್ದು, ಸಂಗ್ರಹಾಲಯ ವೀಕ್ಷಣೆಯಿಂದ ಮಕ್ಕಳಿಗೆ ಮನೋಲ್ಲಾಸವಾಗಲಿದೆ. ಇದೊಂದು ಪ್ರವಾಸಿ ತಾಣವಾಗಲಿದ್ದು, ಮಕ್ಕಳ ಮನರಂಜನೆ, ಮೀನಿನ ಕುರಿತಾಗಿ ಆಸಕ್ತಿದಾಯಕ ಮಾಹಿತಿ ಮಕ್ಕಳು ಪ್ರಾಯೋಗಿಕವಾಗಿ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಇರ್ಫಾನ್ ಬಾಂಗಿ ಮಾತನಾಡಿ, ಮುದ್ದು ಮೀನು ಸಂಗ್ರಾಹಾಲಯ ನವೀಕರಣಗೊಂಡು ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದು, ಎಲ್ಲ ಶಾಲೆಗಳ ವಿದ್ಯಾರ್ಥಿಗಳು, ಸಾರ್ವಜನಿಕರು ವೀಕ್ಷಣೆ ಮಾಡುವುದರ ಜೊತೆಗೆ ಇದರ ಸಂಪೂರ್ಣ ಲಾಭ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಪಂ ಸಿಇಒ ರಾಹುಲ್ ಶಿಂಧೆ, ಎಸ್‌ಪಿ ಎಚ್.ಡಿ. ಆನಂದಕುಮಾರ ಮತ್ತಿತರರಿದ್ದರು.