ಮುದ್ದೇಬಿಹಾಳದಲ್ಲಿ ನಾಡದೇವಿ ಮೆರವಣಿಗೆಯಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಮಹಿಬೂಬ ಗೊಳಸಂಗಿ, ಪ್ರೀತಿ ದೇಗಿನಾಳ, ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಪ್ರತಿಭಾ ಅಂಗಡಗೇರಿ, ಕಾಮರಾಜ ಬಿರಾದಾರ ಇತರರಿದ್ದರು. 
ಜಿಲ್ಲೆ

ಮುದ್ದೇಬಿಹಾಳದಲ್ಲಿ ನವರಾತ್ರೋತ್ಸವ ಆರಂಭ

ಮುದ್ದೇಬಿಹಾಳ: ಪಟ್ಟಣದ ಹೃದಯ ಭಾಗದಲ್ಲಿರುವ ಗ್ರಾಮದೇವತೆ ಕಟ್ಟೆಯ ಮೇಲೆ ಒಂಬತ್ತು ದಿನ ಪೂಜಿತವಾಗುವ ನಾಡದೇವಿ ಚಾಮುಂಡೇಶ್ವರಿ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ನವರಾತ್ರೋತ್ಸವ ಆಚರಣೆಗೆ ಗುರುವಾರ ಚಾಲನೆ ನೀಡಲಾಯಿತು.

ನವರಾತ್ರಿ ಉತ್ಸವ ಕಮಿಟಿ, ವಿಷ್ಣು ಸಮಾಜ ಜಂಟಿಯಾಗಿ 120 ಕೆಜಿ ತೂಕದ 4 ಅಡಿ ಎತ್ತರದ ಚಾಮುಂಡೇಶ್ವರಿ ದೇವಿಯ ಪುತ್ಥಳಿಯನ್ನು ಪರಪ್ರವೇಶಿಸಿಕೊಂಡು, ನಂತರ ಕಿಲ್ಲಾದ ಗುಂಡಪ್ಪನ ಬಾವಿಯಲ್ಲಿ ಗಂಗಾಸ್ನಾನ ಕಾರ್ಯ ಮಾಡಿದರು. ಅಲ್ಲಿಂದ ಸರ್ಾ ಬಜಾರ್ ಮಾರ್ಗವಾಗಿ ಗ್ರಾಮದೇವತೆ ಕಟ್ಟೆಯವರೆಗೂ ದೇವಿಯ ಪುತ್ಥಳಿಯನ್ನು ಚಕ್ಕಡಿಯಲ್ಲಿಟ್ಟು ಮೆರವಣಿಗೆ ಮೂಲಕ ಕರೆತಂದು ಪ್ರತಿಷ್ಠಾಪಿಸಿ ನವರಾತ್ರಿ ಉತ್ಸವದ ಮೊದಲ ದಿನದ ಪೂಜಾ ಕಾರ್ಯ ನೆರವೇರಿಸಲಾಯಿತು.

ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಪ್ರತಿಭಾ ಅಂಗಡಗೇರಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಧ್ಯಕ್ಷ ಕಾಮರಾಜ ಬಿರಾದಾರ ಇನ್ನಿತರರು ಮೆರವಣಿಗೆಯಲ್ಲಿ ಡೊಳ್ಳು ಬಾರಿಸಿ ಗಮನ ಸೆಳೆದರು.

ಕಮಿಟಿಯ ಅಶೋಕ ನಾಡಗೌಡ, ಊರಿನ ಗೌಡರಾದ ಬಸನಗೌಡ ಪಾಟೀಲ (ರಾಯನಗೌಡರ), ಪುಟ್ಟು ಪಾಟೀಲ, ದುರ್ಗಾದೇವಿ ಅರ್ಚಕ ಸಂಗಮೇಶ ನಾಯ್ಕೋಡಿ, ವೀರಭದ್ರೇಶ್ವರ ಜಾತ್ರಾ ಕಮಿಟಿಯ ಪ್ರಮುಖ ಅಪ್ಪಣ್ಣ ಸಿದ್ದಾಪೂರ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ವೀರಶೈವ ಮಹಾಸಭಾದ ಅಧ್ಯಕ್ಷ ವೆಂಕನಗೌಡ ಪಾಟೀಲ, ಪ್ರಮುಖರಾದ ವಿಕ್ರಮ ಓಸ್ವಾಲ್, ಗುರುಲಿಂಗಪ್ಪಗೌಡ ಪಾಟೀಲ, ಉದಯ ರಾಯಚೂರು, ಸಂತೋಷ ನಾಯ್ಕೋಡಿ, ಸುರೇಶ ಕಲಾಲ, ಚಂದ್ರು ಕಲಾಲ, ರಾವಸಾಬ ದೇಸಾಯಿ, ವಿಷ್ಣು ಸಮಾಜದ ಮದನಸಿಂಗ್, ಶಾಂತಿಲಾಲ ಚವ್ಹಾಣ, ರಮೇಶ ಶಿಾ, ವಿಕ್ರಮ ಬೋರಾ, ಭೀಮರಾಮ ಚೌಧರಿ ಹಲವರು ಪಾಲ್ಗೊಂಡಿದ್ದರು. 9 ದಿನಗಳವರೆಗೂ ದೇವಿಗೆ ವಿಶೇಷ ಅಲಂಕಾರ, ಪೂಜೆ ನಡೆಯಲಿದೆ.