ಜಿಲ್ಲೆ

ಗಾನ ಗಾರುಡಿಗ ಎಸ್‌ಪಿಬಿಗೆ ಶ್ರದ್ಧಾಂಜಲಿ

ಮುದ್ದೇಬಿಹಾಳ: ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಪಟ್ಟಣದ ವಿಪ್ರ ಸಮಾಜದಿಂದ ಗಾಯನ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಟ್ಟಣದ ರಾಘವೇಂದ್ರ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮಿವೆಂಕಟೇಶ್ವರ ಭಜನಾ ಮಂಡಳಿಯವರು ಭಾಗವಹಿಸಿ ನುಡಿನಮನ, ಗಾಯನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಸಮಾಜದ ಅಧ್ಯಕ್ಷ ವಾಸುದೇವ ಶಾಸಿ, ಸಂಗಣ್ಣ ಕುಲಕರ್ಣಿ, ರಾಜು ಪದಕಿ, ಸುಧೀಂದ್ರ ಗಿಂಡಿ, ಗಿರೀಶ ದೇಶಪಾಂಡೆ, ಅನೀಲಕುಮಾರ ಕುಲಕರ್ಣಿ, ಪುಟ್ಟು ಕುಲಕರ್ಣಿ ಮತ್ತಿತರರು ಭಾಗವಹಿಸಿದ್ದರು.