ಮುದ್ದೇಬಿಹಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಡಿ.ಬಿ.ಮುದೂರ ಮಾತನಾಡಿದರು. ಹರೀಶ ನಾಟೀಕಾರ, ಭಗವಂತ ಕಬಾಡೆ, ಪರಶುರಾಮ ಮುರಾಳ, ಬಸವರಾಜ ಕೋಳೂರ, ನೀಲಪ್ಪ ನಾಲತವಾಡ ಇತರರಿದ್ದರು.  
ಜಿಲ್ಲೆ

ಒಳಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Vijayapura - Desk - Chinnayya Chinnayyanamath

ಮುದ್ದೇಬಿಹಾಳ: ರಾಜ್ಯದಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ವಯ ಒಳಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ಅ.30 ರಂದು ಮುದ್ದೇಬಿಹಾಳ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ, ಬಹಿರಂಗ ಸಭೆ, ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಒಳಮೀಸಲಾತಿ ಐಕ್ಯತಾ ಹೋರಾಟ ಸಮಿತಿ ಮುಖಂಡರಾದ ಡಿ.ಬಿ.ಮುದೂರ, ಹರೀಶ ನಾಟೀಕಾರ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಐಕ್ಯತಾ ಸಮಿತಿ ನೇತೃತ್ವದಲ್ಲಿ ತಾಲೂಕಿನ ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಜನಜಾಗೃತಿ ಮೂಡಿಸುವ ಯಾತ್ರೆ ಪ್ರಗತಿಯಲ್ಲಿದೆ. ನಮ್ಮ ಸಮುದಾಯಗಳ ಜನರನ್ನು ಸೇರಿಸಿ ಒಳಮೀಸಲಾತಿ ಮಹತ್ವ ತಿಳಿಸಿಕೊಡಲಾಗುತ್ತಿದೆ.

ಪ್ರೀಂಕೋರ್ಟ್ ತೀರ್ಪಿನ ನಂತರವೂ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸುವಲ್ಲಿ ನಿರಾಸಕ್ತಿ ತೋರಿಸುತ್ತಿದೆ. ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಹೋರಾಟವನ್ನು ರಾಜ್ಯವ್ಯಾಪಿ ವಿಸ್ತರಿಸಬೇಕಾಗುತ್ತದೆ. ಅದೇ ದಿನ ಶಾಸಕರ ನಿವಾಸಕ್ಕೂ ತೆರಳಿ ಅವರಿಗೂ ಮನವಿ ಸಲ್ಲಿಸಿ ಸರ್ಕಾರದ ಮೇಲೆ ಒತ್ತಡ ತರಲು ಮನವಿ ಮಾಡಲಾಗುತ್ತದೆ ಎಂದರು.

ಸಮಿತಿಯ ಮುಖಂಡರಾದ ಭಗವಂತ ಕಬಾಡೆ, ಪರಶುರಾಮ ಮುರಾಳ, ಬಸವರಾಜ ಕೋಳೂರ, ನೀಲಪ್ಪ ನಾಲತವಾಡ, ಭೀಮಣ್ಣ ಲೋಟಗೇರಿ, ಹಣಮಂತ ಮಾದರ ಇತರರಿದ್ದರು.