ಜಿಲ್ಲೆ

ಕಬ್ಬಿಗೆ ಬೆಂಕಿ ಬಿದ್ದು ಅಪಾರ ಹಾನಿ

Vijayapura

ಮುದ್ದೇಬಿಹಾಳ: ತಾಲೂಕಿನ ಮಡಿಕೇಶ್ವರ ಗ್ರಾಮದಲ್ಲಿ ಸೋಮವಾರ ವಿದ್ಯುತ್ ಅವಘಡದಿಂದ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಅಪಾರ ಹಾನಿ ಆಗಿದೆ.

ಗ್ರಾಮದ ಮಲ್ಲಪ್ಪ ನಿಂಗಪ್ಪ ನಾಯ್ಕೋಡಿ ಅವರಿಗೆ ಸೇರಿದ ಸರ್ವೇ ನಂ.234/3ರ ಎರಡು ಎಕರೆ ಹಾಗೂ ಬನ್ನೆಪ್ಪ ಪರಪ್ಪ ನಾಯ್ಕೋಡಿ ಅವರಿಗೆ ಸಂಬಂಧಿಸಿದ ಸರ್ವೇ ನಂಬರ್ 234/4 ರಲ್ಲಿ ಬರುವ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗೆ ಆಹುತಿಯಾಗಿದೆ.

ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಿರುವ ವಿಷಯ ತಿಳಿದ ಮುದ್ದೇಬಿಹಾಳ ಹಾಗೂ ತಾಳಿಕೋಟೆ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸಿದರಾದರೂ ಹೆಚ್ಚಿನ ಹಾನಿ ತಡೆಯಲಾಗಲಿಲ್ಲ.

ಗ್ರಾಮಸ್ಥರಾದ ಗೌಡಪ್ಪ ಹುಲಿಬೆಂಚಿ, ಮಾಂತಪ್ಪ ಯಲಗೋಡ, ಯಲ್ಲಪ್ಪ ಕೂಡಗಿ, ಪ್ರಕಾಶ ಹೂಗಾರ, ಯಲ್ಲಪ್ಪ ವಗ್ಗರ, ಸಂಗಣ್ಣ ವಗ್ಗರ ಮತ್ತಿತರರು ಬೆಂಕಿ ನಂದಿಸಲು ರೈತರಿಗೆ ಸಹಕಾರ ನೀಡಿದರು.