ಜಿಲ್ಲೆ

ಆರ್‌ಎಂಎಸ್‌ಎ ಪ್ರವೇಶ ಪರೀಕ್ಷೆ ಸುಸೂತ್ರ

Vijayapura

ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಆರ್‌ಎಂಎಸ್‌ಎ ಶಾಲೆಯ 7,8 ಮತ್ತು 9ನೇ ತರಗತಿಯ ಖಾಲಿ ಉಳಿದಿರುವ ಸೀಟುಗಳಿಗೆ ಭಾನುವಾರ ಕೋವಿಡ್-19 ನಿಯಮಾವಳಿ ಅನ್ವಯ ಆರೋಗ್ಯ ತಪಾಸಿಸಿ ಪರೀಕ್ಷೆ ನಡೆಸಲಾಯಿತು. ಮಾಸ್ಕ್, ಸ್ಯಾನಿಟೈಸರ್‌ನ್ನು ಕಡ್ಡಾಯವಾಗಿ ಬಳಸಿದ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕಾೃನ್ ಮಾಡಲಾಯಿತು. ಡೈಯಟ್‌ನ ಹಿರಿಯ ಉಪನ್ಯಾಸಕ ಎಂ.ಎ. ಗುಳೇದಗುಡ್ಡ, ಬಿಆರ್‌ಸಿ ಯು.ಬಿ.ಧರಿಕಾರ, ನೋಡಲ್ ಅಧಿಕಾರಿ ಎ.ಎಸ್. ಬಾಗವಾನ, ಮುಖ್ಯಗುರುಮಾತೆ ಎನ್.ಬಿ. ತೆಗ್ಗಿನಮನಮಠ, ಬಸವರಾಜ ಹಂಚಲಿ, ಎಚ್. ಎ. ಬಿ.ಎಸ್. ಹಂಚಲಿ, ಆರ್.ಕೆ. ದೇವರಗಿಕರ, ಸವಿತಾ ಪವಾರ ಮತ್ತಿತರರಿದ್ದರು.