ಜಿಲ್ಲೆ

ಅಪರಿಚಿತ ಕಾರು ಡಿಕ್ಕಿಯಾಗಿ ಯುವಕ ಸಾವು

Vijayapura


ಮುದ್ದೇಬಿಹಾಳ: ಪಟ್ಟಣದ ಹೆಸ್ಕಾಂ ಕಚೇರಿ ಎದುರಿಗೆ ಭಾನುವಾರ ಸಂಜೆ ಬೈಕ್ ಸವಾರನಿಗೆ ಹಿಂಬದಿಯಿಂದ ಅಪರಿಚಿತ ಕಾರು ಡಿಕ್ಕಿಯಾಗಿ ಮುಂದಿನ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.ತಾಲೂಕಿನ ಮುದ್ನಾಳ ತಾಂಡಾದ ಸಚಿನ್ ಬಸವರಾಜ ಲಮಾಣಿ (22)ಮೃತ ಯುವಕ. ಅಪಘಾತ ವೇಳೆ ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಸಿಟಿವಿ ಬಂದ್
ಪಟ್ಟಣದ ಪಿಲೇಕೆಮ್ಮ ದೇವಸ್ಥಾನ ಬಳಿ ಪೊಲೀಸ್ ಇಲಾಖೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸಿಸಿಟಿವಿ ಅಳವಡಿಸಿದೆ. ಆದರೆ, ಅದು ಬಂದ್ ಆಗಿದ್ದರಿಂದ ಅಪಘಾತದ ದೃಶ್ಯ ಸಿಗದಂತಾಗಿದೆ. ಸಾರ್ವಜನಿಕರಿಂದ ಲಕ್ಷಾಂತರ ರೂ.ದೇಣಿಗೆ ಸಂಗ್ರಹಿಸಿ ಅಳವಡಿಸಿದ ಸಿಸಿಟಿವಿ ಕ್ಯಾಮರಾ ಚಾಲನೆಯಲ್ಲಿ ಇಲ್ಲದಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಐ ಆನಂದ ವಾಘ್ಮೋಡೆ, ಸಿಸಿಟಿವಿ ಕ್ಯಾಮರಾ ದುರಸ್ತಿಯಲ್ಲಿದ್ದು ರಿಪೇರಿ ಮಾಡಿಸಲಾಗುವುದು ಎಂದು ತಿಳಿಸಿದ್ದಾರೆ.