ಮುದ್ದೇಬಿಹಾಳ ತಾಲೂಕಿನ ಚೊಂಡಿ ಗ್ರಾಮದಲ್ಲಿ ಬಾವಿಯಲ್ಲಿ ಬಿದ್ದಿದ್ದ ಹಸುವನ್ನು ಸ್ಥಳೀಯರ ನೆರವಿನೊಂದಿಗೆ ಮೇಲೆತ್ತುತ್ತಿರುವ ಅಗ್ನಿಶಾಮಕ ಸಿಬ್ಬಂದಿ. 
ಜಿಲ್ಲೆ

ಬಾವಿಯಲ್ಲಿ ಬಿದ್ದಿದ್ದ ಹಸು ರಕ್ಷಣೆ

ಮುದ್ದೇಬಿಹಾಳ: ತಾಲೂಕಿನ ಚೊಂಡಿ ಗ್ರಾಮದ ಖಾಸೀಂಸಾಬ್ ಎನ್ನುವವರ ಜಮೀನಿನಲ್ಲಿರುವ 50 ಅಡಿ ಆಳದ ತೆರೆದ ಬಾವಿಯಲ್ಲಿ ಕಾಲು ಜಾರಿ ಬಿದ್ದಿದ್ದ ಹಸುವನ್ನು ಮುದ್ದೇಬಿಹಾಳದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಭಾನುವಾರ ರಕ್ಷಿಸಿ ಮಾನವೀಯತೆ ಮೆರೆದರು.

ಸಕಾಲಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಬಾವಿಯೊಳಗೆ ಇಳಿದು, ಹಗ್ಗ ಮತ್ತು ಪಟ್ಟಿ ಬಳಸಿ ಹಸುವನ್ನು ಸುರಕ್ಷಿತವಾಗಿ ಮೇಲೆತ್ತಿದರು.

ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರಮೇಶ ಚಾಳಣ್ಣನವರ, ಸಿಬ್ಬಂದಿ ಸುಭಾಸ ರಾಠೋಡ, ಸಿದ್ದಣ್ಣ ಪೋಲೇಶಿ, ಸಂತೋಷ ಲಮಾಣಿ, ಮಹೇಶ ಕರಡ್ಡಿ, ಪ್ರಕಾಶ ಸುಬ್ಬನಗೋಳ, ಶಕೀಲ್ ಅವಟಿ, ಮಂಜುನಾಥ ಬಳಿಗಾರ, ರವೀಂದ್ರ ರತ್ನಾಕರ, ಪೊಲೀಸ್ 112 ವಾಹನ ಸಿಬ್ಬಂದಿ ಸಿಕಂದರ್ ಮಸಳಿ, ಯಲ್ಲಪ್ಪ ಭಜಂತ್ರಿ ಹಾಗೂ ಸ್ಥಳೀಯರು ಹಸು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.