ಮುದ್ದೇಬಿಹಾಳ: ಮೊದಲು ಗುರು ಎಂಬ ಪದಕ್ಕೆ ತುಂಬಾ ಗೌರವ ಇತ್ತು. ಆದರೆ, ಮಹಾನಗರಗಳೂ ಸೇರಿದಂತೆ ಹಲವು ಪಟ್ಟಣಗಳಲ್ಲಿ ಲಾಂಗ್, ಮಚ್ಚು ಹಿಡಿದು ತಿರುಗಾಡುವವರಿಗೆಲ್ಲಾ ಗುರು ಎಂದು ಕರೆಯುತ್ತಿರುವುದು ತೀವ್ರ ಕಳವಳಕಾರಿ ಸಂಗತಿ ಎಂದು ಕುಂಟೋಜಿ ಹಿರೇಮಠದ ಚನ್ನವೀರ ದೇವರು ಹೇಳಿದರು.
ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿರುವ ಕರ್ನಾಟಕ ಬ್ಯಾಂಕ್ ಸಭಾಭವನದಲ್ಲಿ ಭಾನುವಾರ ವಿಬಿಸಿ ಪ್ರೌಢಶಾಲೆಯ 1994-95ನೇ ಸಾಲಿನ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಬೆಂಗಳೂರಿನ ಕಲಾಸಿಪಾಳ್ಯೆ, ಶಿವಾಜಿ ನಗರದಂತಹ ಪ್ರದೇಶಗಳಲ್ಲಿ ಯಾರು ಕೈಯ್ಯಲ್ಲಿ ಜಂಭೆ(ತ್ರಿಶೂಲ), ಲಾಂಗ್ ಹಿಡಿದವರನ್ನು ಏಯ್ ಗುರು ಎಂದು ಕರೆಯುವ ಪದ್ಧತಿ ನಿಜವಾದ ಗುರುವಿಗೆ ಅವಮಾನಿಸಿದಂತೆ. ಪ್ರತಿಯೊಬ್ಬರ ಜೀವನದಲ್ಲಿ ನಿಜವಾದ ದೇವರು ಗುರುಗಳು ಎಂದು ಹೇಳಿದರು.
ನಿವೃತ್ತ ಶಿಕ್ಷಕ ವಿ.ಎನ್. ಕಿಣಗಿ ಮಾತನಾಡಿ, ತನ್ನ ಕೈಯ್ಯಲ್ಲಿ ಓದಿದ ವಿದ್ಯಾರ್ಥಿ ಮುಂದೆ ಪೊಲೀಸ್ ಅಧಿಕಾರಿಯೋ, ವಕೀಲನೋ, ವೈದ್ಯನೋ ಆಗಿದ್ದು ಕಂಡರೆ ಸ್ವತಃ ಗುರು ತಾನೇ ಆ ಹುದ್ದೆಗಳಲ್ಲಿ ಇದ್ದೇನೆ ಎಂಬ ಭಾವ ಹೊಂದಿ ಖುಷಿ ಪಡುತ್ತಾನೆ ಎಂದು ಹೇಳಿದರು.
ಶಿಕ್ಷಕರಾದ ಎಂ.ಜಿ. ಹೊಕ್ರಾಣಿ, ಎಸ್.ಆರ್. ನಾಯಕ, ನಿವೃತ್ತ ಶಿಕ್ಷಕ ಎಸ್.ಬಿ. ಕನ್ನೂರ ಮಾತನಾಡಿದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ವೈಜ್ಞಾನಿಕವಾಗಿ ಬಾಟಲ್‌ದಲ್ಲಿ ರಾಸಾಯನಿಕ ಕ್ರಿಯೆಯ ಮೂಲಕ ಬಲೂನ್‌ಗೆ ಗಾಳಿ ತುಂಬಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಪವಿತ್ರಾ ಪಾಟೀಲ, ಸಹನಾ ಆಲಕಟ್ಟಿ ಪ್ರಾರ್ಥಿಸಿದರು. ಶಿಕ್ಷಕ ಬಿ.ಎಂ. ಕಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೋಭಾ ಹಿರೇಮಠ ಸ್ವಾಗತಿಸಿದರು. ಪ್ರಕಾಶ ಮಠ ಹಾಗೂ ಮಹಾಂತೇಶ ಅಂಗಡಿ ನಿರೂಪಿಸಿದರು.
ಗುರುಗಳಿಗೆ ಗೌರವ
ನಿವೃತ್ತ ಶಿಕ್ಷಕರಾದ ಎಸ್.ಬಿ. ಕನ್ನೂರ, ಜಿ.ಆರ್. ನಾವದಗಿ, ವಿ.ಎನ್. ಕಿಣಗಿ, ಎಂ.ಎಸ್. ನಾಗಠಾಣ, ಎಸ್.ಎಲ್. ಗುರವ, ಕೆ.ಪಿ.ಹಿರೇಮಠ, ಎಂ.ಎಂ. ಮುದ್ದೇಬಿಹಾಳ, ಬಿ.ಕೆ. ಪಾಟೀಲ, ಎಸ್.ಎ. ಐಹೊಳ್ಳಿ, ಆರ್.ಎಂ. ಪಾಟೀಲ, ಶಿಕ್ಷಕರಾದ ಆರ್.ಬಿ. ಮದಿಹಾಳ, ವಿ.ಐ. ಗೂಳಿ, ಎಂ.ಜಿ. ಹೊಕ್ರಾಣಿ, ಎಸ್.ಆರ್. ನಾಯಕ, ಎಚ್.ಆರ್. ಬಾಗವಾನ, ಎಸ್.ಎಂ. ಚಳಗೇರಿ, ವಿಜಯಲಕ್ಷ್ಮಿ ಬಿರಾದಾರ, ಎಸ್.ಎಂ. ಓತಗೇರಿ ಅವರನ್ನು ಸನ್ಮಾನಿಸಲಾಯಿತು.