ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಪಂದ್ಯಾಟದಲ್ಲಿ ಮಂಗಳವಾರ ೬ ತಂಡಗಳು ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್ ಹಂತಕ್ಕೆ ಅರ್ಹತೆ ಪಡೆದುಕೊಂಡಿತು.
ಮಡಿಕೇರಿಯ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನಲ್ಲಿ ಮೇಚಿಯಂಡ ಮತ್ತು ಚೇಂದಂಡ ೬-೦ ಗೋಲುಗಳ ಅಂತರದಲ್ಲಿ ಚೇಂದಂಡ ತಂಡ ಜಯ ಸಾಧಿಸಿತು. ಚೇಂದಂಡ ಪರ ಸುಬ್ಬಿ ಸುಬ್ಬಯ್ಯ ೪ ಹಾಗೂ ನಿಖಿನ್ ತಿಮ್ಮಯ್ಯ ಹಾಗೂ ಬಿಪಿನ್ ಬೋಪಣ್ಣ ತಲಾ ೧ ಗೋಲು ದಾಖಲಿಸಿದರು. ಅಂಜಪರವಂಡ ಮತ್ತು ಚೆಪ್ಪುಡಿರ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ಚೆಪ್ಪುಡಿರ ಜಯ ಸಾಧಿಸಿತು. ಚೆಪ್ಪುಡಿರ ಪರ ಚೇತನ್ ಚಿಣ್ಣಪ್ಪ, ವಚನ್ ಚಿಣ್ಣಪ್ಪ, ನರನ್ ಕಾರ್ಯಪ್ಪ ಹಾಗೂ ಪ್ರಣವ್ ತಿಮ್ಮಯ್ಯ ತಲಾ ೧ ಗೋಲು ದಾಖಲಿಸಿದರು.
ಸಣ್ಣುವಂಡ ಮತ್ತು ಮಂಡೇಪಂಡ ನಡುವಿನ ಪಂದ್ಯದಲ್ಲಿ ೪-೧ ಗೋಲುಗಳ ಅಂತರದಲ್ಲಿ ಮಂಡೇಪಂಡ ಗೆಲುವು ಸಾಧಿಸಿತು. ಮಂಡೇಪಂಡ ಪರ ಕವನ್ ಮುತ್ತಪ್ಪ ೨, ಚಂಗಪ್ಪ ಹಾಗೂ ನಂಜಪ್ಪ ತಲಾ ೧ ಗೋಲು ದಾಖಲಿಸಿದರು. ಸಣ್ಣುವಂಡ ಪರ ಯತಿನ್ ಅಯ್ಯಪ್ಪ ೧ ಗೋಲು ಬಾರಿಸಿದರು. ಪರದಂಡ ಮತ್ತು ಕುಪ್ಪಂಡ (ಕೈಕೇರಿ) ನಡುವಿನ ಪಂದ್ಯದಲ್ಲಿ ೫-೨ ಗೋಲಗಳ ಅಂತರದಲ್ಲಿ ಕುಪ್ಪಂಡ ತಂಡ ಗೆಲುವು ಸಾಧಿಸಿತು. ಕುಪ್ಪಂಡ ಪರ ಜಗತ್ ೨, ಸೋಮಯ್ಯ, ಪ್ರಧಾನ್, ದ್ಯಾನ್ ತಲಾ ೧ ಗೋಲು ದಾಖಲಿಸಿದರು.