ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಪಂದ್ಯಾಟದಲ್ಲಿ ಬುಧವಾರ ಮಂಡೇಟಿರ ತಂಡದ ವಿರುದ್ಧ ೫-೪ ಗೋಲುಗಳ ಅಂತರದಲ್ಲಿ ಚಂಗುಲಂಡ ತಂಡ ರೋಚಕ ಜಯ ಸಾಧಿಸಿತು.
ಮಡಿಕೇರಿಯ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನ ೧ರಲ್ಲಿ ಮಂಡೇಟಿರ ಮತ್ತು ಚಂಗುಲಂಡ ನಡುವಿನ ಪಂದ್ಯದಲ್ಲಿ ಎರಡೂ ತಂಗಳು ನಿಗಧಿತ ಅವಧಿಯಲ್ಲಿ ತಲಾ ೨ ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೫-೪ ಗೋಲುಗಳ ಅಂತರದಲ್ಲಿ ಚಂಗುಲಂಡ ತಂಡ ಗೆಲುವು ದಾಖಲಿಸಿತು. ಚಂಗುಲಂಡ ಪರ ಗೌತಮ್ ೨ ಹಾಗೂ ಮಂಡೇಟಿರ ಪರ ತಿಲಕ್ ಅಯ್ಯಪ್ಪ ಮತ್ತು ನೆಹಾಲ್ ಬೆಳ್ಯಪ್ಪ ತಲಾ ೧ ಗೋಲು ದಾಖಲಿಸಿದರು. ಮಂಡೇಟಿರ ಸೋಹನ್ ಕಾರ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕಳ್ಳಿಚಂಡ ಮತ್ತು ಮಚ್ಚಾರಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ತಲಾ ೧ ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೪-೨ ಗೋಲುಗಳ ಅಂತರದಲ್ಲಿ ಕಳ್ಳಿಚಂಡ ತಂಡ ಜಯ ಸಾಧಿಸಿತು. ಕಳ್ಳಿಚಂಡ ಪರ ದೀವನ್ ಹಾಗೂ ಕಾವೇರಪ್ಪ ತಲಾ ೧ ಗೋಲು ದಾಖಲಿಸಿದರು. ಮಚ್ಚಾರಂಡ ಪರ ಗಣಪತಿ ಹಾಗೂ ತಮ್ಮಯ್ಯ ತಲಾ ೧ ಗೋಲು ದಾಖಲಿಸಿದರು. ಮಚ್ಚಾರಂಡ ಗಣಪತಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕೊಂಗಂಡ ಮತ್ತು ಕಂಬೀರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಕಂಬೀರಂಡ ತಂಡ ಗೆಲುವು ಸಾಧಿಸಿತು. ಕಂಬೀರಂಡ ತಂಡದ ಪರ ಮಯ್ಯುರ್ ಬೋಪಯ್ಯ ಹಾಗೂ ಮೊಣ್ಣಪ್ಪ ತಲಾ ೧ ಗೋಲು ದಾಖಲಿಸಿದರು. ಕೊಂಗಂಡ ನಾಚಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಬಾಳೆಯಡ ಮತ್ತು ಕೋಣೇರಿರ ತಂಡಗಳ ನಡುವಿನ ಪಂದ್ಯದಲ್ಲಿ ೩-೧ ಗೋಲುಗಳ ಅಂತರದಲ್ಲಿ ಕೋಣೇರಿರ ಗೆಲುವು ದಾಖಲಿಸಿತು. ಕೋಣೇರಿರ ಪರ ಮಧು ಮಂದಣ್ಣ, ವಿಪಿನ್ ಚಂಗಪ್ಪ ಹಾಗೂ ಜೀವನ್ ಚೆಂಗಪ್ಪ ತಲಾ ೧ ಗೋಲು ದಾಖಲಿಸಿದರು. ಬಾಳೆಯಡ ವಿನಿಲ್ ಮಂದಣ್ಣ ೧ ಗೋಲು ದಾಖಲಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಇಟ್ಟಿರ ಮತ್ತು ಕಂಬೆಯಂಡ ನಡುವಿನ ಪಂದ್ಯದಲ್ಲಿ ೪-೨ ಗೋಲುಗಳ ಅಂತರದಲ್ಲಿ ಇಟ್ಟಿರ ತಂಡ ಜಯ ಸಾಧಿಸಿತು. ಇಟ್ಟಿರ ಪರ ರೋಹನ್ ಅಚ್ಚಯ್ಯ, ಶಾನ್ ಸೋಮಣ್ಣ, ಭವಿಶ್ ಕುಶಾಲಪ್ಪ ಹಾಗೂ ಕವಿನ್ ಕುಟ್ಟಪ್ಪ ತಲಾ ೧ ಗೋಲು ದಾಖಲಿಸಿದರು. ಕಂಬೆಯಂಡ ಪರ ಲಿಖಿತ್ ತಿಮ್ಮಯ್ಯ ಹಾಗೂ ಕಾರ್ಯಪ್ಪ ತಲಾ ೧ ಗೋಲು ದಾಖಲಿಸಿದರು. ಕಂಬೆಯಂಡ ಕಾರ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕಾಂಡಂಡ ಮತ್ತು ನುಚ್ಚಿಮಣಿಯಂಡ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಕಾಂಡಂಡ ಗೆಲುವು ಸಾಧಿಸಿತು. ಕಾಂಡಂಡ ಪರ ಆದಿತ್ಯ ಅಪ್ಪಣ್ಣ ೧ ಗೋಲು ದಾಖಲಿಸಿದರು. ನುಚ್ಚಿಮಣಿಯಂಡ ಪೂವಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮಲ್ಲಂಡ ಮತ್ತು ಕುಲ್ಲೇಟಿರ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ಕುಲ್ಲೇಟಿರ ಜಯ ಸಾಧಿಸಿತು. ಕುಲ್ಲೇಟಿರ ಪರ ನಿಶ್ಚಲ್ ನಾಚಪ್ಪ ಹ್ಯಾಟ್ರಿಕ್ ಗೋಲು ದಾಖಲಿಸಿದರೆ, ಅವನೀಶ್ ಮಂದಪ್ಪ ೧ ಗೋಲು ದಾಖಲಿಸಿದರು. ಮಲ್ಲಂಡ ಪೊನ್ನಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮೈದಾನ ೨ರಲ್ಲಿ ಮಾದಂಡ ಮತ್ತು ಮದ್ರೀರ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಮಾದಂಡ ತಂಡ ಜಯ ಸಾಧಿಸಿತು. ಮಾದಂಡ ಪರ ಸಂದೇಶ್ ಅಪ್ಪಯ್ಯ ೧ ಗೋಲು ದಾಖಲಿಸಿದರು. ಮದ್ರೀರ ಗಣಪತಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಪಳಂಗಂಡ ಮತ್ತು ಮೇಚಿಯಂಡ ನಡುವಿನ ಪಂದ್ಯದಲ್ಲಿ ತಲಾ ೧ ಗೋಲುಗಳ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೫-೪ ಗೋಲುಗಳ ಅಂತರದಲ್ಲಿ ಮೇಚಿಯಂಡ ಜಯ ಸಾಧಿಸಿತು. ಮೇಚಿಯಂಡ ಪರ ವಿನಿತ್ ನಾಣಯ್ಯ ೧ ಹಾಗೂ ಪೊನ್ನಪ್ಪ ೧ ಗೋಲು ದಾಖಲಿಸಿದರು. ಪಳಂಗಂಡ ಶಶಾಂಕ್ ಸುಬ್ಬಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಬೊಳ್ಳಂಡ ಮತ್ತು ವಾಟೇರಿರ ನಡುವಿನ ಪಂದ್ಯದಲ್ಲಿ ೩-೧ ಗೋಲುಗಳ ಅಂತರದಲ್ಲಿ ಬೊಳ್ಳಂಡ ತಂಡ ಜಯ ಸಾಧಿಸಿತು. ಬೊಳ್ಳಂಡ ಪರ ಯಶ್ ಮಾಚಯ್ಯ ೨ ಹಾಗೂ ರೋಶನ್ ೧ ಗೋಲು ಬಾರಿಸಿದರು. ವಾಟೇರಿರ ನಾಣಯ್ಯ ೧ ಗೋಲು ದಾಖಲಿಸಿದರು. ವಾಟೇರಿರ ಕರಣ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೆಚೇಟಿರ (ಕಡಗದಾಳು) ಮತ್ತು ಬೊಟ್ಟೋಳಂಡ ನಡುವಿನ ಪಂದ್ಯದಲ್ಲಿ ೩-೦ ಗೋಲುಗಳ ಅಂತರದಲ್ಲಿ ಬೊಟ್ಟೋಳಂಡ ಗೆಲುವು ದಾಖಲಿಸಿತು. ಬೊಟ್ಟೋಳಂಡ ಪರ ಪೃಥ್ವಿ ಬೋಪಣ್ಣ, ಸೂರಜ್ ಅಯ್ಯಪ್ಪ ಹಾಗೂ ಗಗನ್ ಅಪ್ಪಣ್ಣ ತಲಾ ೧ ಗೋಲು ದಾಖಲಿಸಿದರು.
ಕನ್ನಂಡ ಮತ್ತು ಕೋಡೀರ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಕನ್ನಡ ತಂಡ ಜಯ ಸಾಧಿಸಿತು. ಕನ್ನಂಡ ತಂಡದ ಪರ ಶರಣ್ ಕಾವೇಪ್ಪ ೧ ಗೋಲು ದಾಖಲಿಸಿದರು. ಚೇಂದಂಡ ಮತ್ತು ಬಡುವಮಂಡ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ಚೇಂದಂಡ ತಂಡ ಜಯ ಸಾಧಿಸಿತು. ಚೇಂದಂಡ ಪರ ಮೋಕ್ಷಿತ್ ೨, ಅಮೋಘ್ ಹಾಗೂ ತಹಾನ್ ತಲಾ ೧ ಗೋಲು ದಾಖಲಿಸಿದರು.
ಇಂದಿನ ಪಂದ್ಯಾಟ
ಮೈದಾನ ೧
ಬೆಳಿಗ್ಗೆ ೯ ಗಂಟೆಗೆ ಕುಪ್ಪಂಡ (ಕೈಕೇರಿ) ಮತ್ತು ನಾಗಂಡ, ೧೦ ಗಂಟೆಗೆ ಮತ್ರಂಡ ಮತ್ತು ಕಲಿಯಂಡ, ೧೧ ಗಂಟೆಗೆ ಅನ್ನಾಡಿಯಂಡ ಮತ್ತು ಪರದಂಡ, ಮಧ್ಯಾಹ್ನ ೧೨ ಗಂಟೆಗೆ ಬೊಳ್ಳೇರ ಮತ್ತು ಮುಕ್ಕಾಟಿರ (ಬೊಂದ), ೧ ಗಂಟೆಗೆ ಪಡೆಯಂಡ ಮತ್ತು ಐನಂಡ, ೩ ಗಂಟೆಗೆ ಕೇಲೇಟಿರ ಮತ್ತು ಕೋಳೆರ ಕುಟುಂಬಗಳು ಸೆಣಸಾಟ ನಡೆಸಲಿದೆ.
ಮೈದಾನ೨
ಬೆಳಿಗ್ಗೆ ೯ ಗಂಟೆಗೆ ನೆಲ್ಲಮಕ್ಕಡ ಮತ್ತು ಮುಕ್ಕಾಟಿರ (ಕಡಗದಾಳು), ೧೦ ಗಂಟೆಗೆ ಕುಂಡ್ಯೋಳಂಡ ಮತ್ತು ನಾಪಂಡ, ಮಧ್ಯಾಹ್ನ ೧ ಗಂಟೆಗೆ ಚೆಕ್ಕೇರ ಮತ್ತು ಶಾಂತೆಯಂಡ, ೨ ಗಂಟೆಗೆ ಕೂತಂಡ ಮತ್ತು ಅಲ್ಲಪಂಡ, ೩ ಗಂಟೆಗೆ ಕುಲ್ಲಚಂಡ ಮತ್ತು ಪೆಮ್ಮಂಡ ಕುಟುಂಬಗಳು ಸೆಣಸಾಟ ನಡೆಸಲಿದೆ.