ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಪಂದ್ಯಾಟದಲ್ಲಿ ಸೋಮವಾರ ೨೦ ತಂಡಗಳು ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.
ಮಡಿಕೇರಿಯ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನ ೧ರಲ್ಲಿ ಪುಚ್ಚಿಮಾಡ ಮತ್ತು ಮಂಡೀರ(ಮಾದಪುರ) ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಪುಚ್ಚಿಮಾಡ ತಂಡ ೩ ಗೋಲುಗಳನ್ನು ಬಾರಿಸಿ ಮಂಡೀರ ತಂಡವನ್ನು ಪರಬಾವಗೊಳಿಸಿತು. ಮುಕ್ಕಾಟಿರ(ಮುವತ್ತೊಕ್ಲು) ಮತ್ತು ಚೆಯ್ಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಯ್ಯಂಡ ತಂಡ ಭರ್ಜರಿ ೫ ಗೋಲುಗಳನ್ನು ದಾಖಲಿಸುವ ಮೂಲಕ ಗೆಲುವು ಸಾಧಿಸಿತು.
ಪುಚ್ಚಿಮಂಡ ಮತ್ತು ಕಾಂಗಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಾಂಗಂಡ ತಂಡ ೨-೦ ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಕುಪ್ಪಂಡ (ನಾಂಗಲ) ಮತ್ತು ಬೊಳ್ಳೆಪಂಡ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಕುಪ್ಪಂಡ ತಂಡ ೨-೧ ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಮರ್ಚಂಡ ಮತ್ತು ಮಾಣೀರ ತಂಡಗಳ ನಡುವಿನ ಪಂದ್ಯಾಟದಲ್ಲಿ ೫-೦ ಗೋಲುಗಳ ಅಂತರದಲ್ಲಿ ಮರ್ಚಂಡ ತಂಡ ಗೆಲುವು ದಾಖಲಿಸಿತು.
ಗೌಡಂಡ ಮತ್ತು ಪಳೆಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಳೆಯಂಡ ೩-೦ ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಪಳೆಯಂಡ ತಂಡದ ಸೂರಿ ಸುಬ್ಬಯ್ಯ, ಪಾರ್ತ ಚಿಣ್ಣಪ್ಪ ಹಾಗೂ ಪಿ.ಕೆ.ಬೋಪಣ್ಣ, ತಲಾ ೧ ಗೋಲು ದಾಖಲಿಸಿದರು. ಗೌಡಂಡ ತಂಡದ ಪೊನ್ನಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.
ಚೆಟ್ಟಿಯಾರಂಡ ಮತ್ತು ಚಿಕ್ಕಂಡ ತಂಡಗಳ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಚೆಟ್ಟಿಯಾರಂಡ ಗೆಲುವು ಸಾಧಿಸಿತು. ಚೆಟ್ಟಿಯಾರಂಡ ತಂಡದ ಬಿನ್ನು ಕಾವೇರಪ್ಪ ೧ ಗೋಲು ದಾಖಲಿಸಿದರು. ಚೆಕ್ಕಂಡ ತಂಡದ ಡಾಲು ಮೊಣ್ಣಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.
ಮೈದಾನ ೨ರಲ್ಲಿ ನಡೆದ ನಂದೇಟಿರ ಹಾಗೂ ಕಲ್ಲೇಂಗಡ (ನಾಪೋಕ್ಲು) ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ನಂದೇಟಿರ ತಂಡ ೨-೧ ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ದಾಸಂಡ ಮತ್ತು ಪಾಸುರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ದಾಸಂಡ ತಂಡ ೪-೦ ಗೋಲುಗಳ ಅಂತರದಿಂದ ಗೆಲುವು ದಾಖಲಿಸಿತು.
ಬೊಪ್ಪಂಡ ಮತ್ತು ಕರ್ತುರ ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ೫-೧ ಗೋಲುಗಳ ಅಂತರದಿಂದ ಬೊಪ್ಪಂಡ ತಂಡ ಗೆಲುವು ಸಾಧಿಸಿತು. ಬೊಪ್ಪಂಡ ತಂಡದ ವಿಖ್ಯಾತ್ ಮಂದಣ್ಣ ಭರ್ಜರಿ ೫ ಗೋಲುಗಳನ್ನು ದಾಖಲಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಕರ್ತುರ ತಂಡದ ಕಾರ್ತಿಕ್ ಪೆಮ್ಮಯ್ಯ ೧ ಗೋಲು ದಾಖಲಿಸಿದರು. ಕರ್ತುರ ತಂಡದ ದರ್ಶನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಐಚಂಡ ಮತ್ತು ಮುಡ್ಯೋಳಂಡ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ ೧ ಗೋಲುಗಳನ್ನು ಪಡೆಯುವ ಮೂಲಕ ಪಂದ್ಯ ಡ್ರಾನಲ್ಲಿ ಮುಕ್ತಾಯವಾಯಿತು. ಐಚಂಡ ತಂಡದ ಪವನ್ ಪೊನ್ನಪ್ಪ ಹಾಗೂ ಮುಡ್ಯೋಳಂಡ ಬ್ರಿಜೇಶ್ ಗಣಪತಿ ತಲಾ ೧ ಗೋಲು ಬಾರಿಸಿದರು. ಮುಡ್ಯೋಳಂಡ ನಿರನ್ ನಾಣಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ನಾಟೋಳಂಡ ಮತ್ತು ಕರ್ತಚ್ಚಿರ ತಂಡಗಳ ನಡುವೆ ನಡೆದ ಪಂದ್ಯ ತಲಾ ೨ ಗೋಲು ಪಡೆಯುವ ಮೂಲಕ ಡ್ರಾ ಗೊಂಡಿತು. ಟ್ರೈ ಬ್ರೆಕರ್‌ನಲ್ಲಿ ಕರ್ತಚ್ಚಿರ ತಂಡ ಗೆಲುವು ದಾಖಲಿಸಿತು. ಕರ್ತಚ್ಚಿರ ತಂಡದ ಧ್ಯಾನ್ ಪೂಣಚ್ಚ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕರ್ತಚ್ಚಿರ ತಂಡದ ಡ್ಯಾನಿ ಕಾಳಪ್ಪ ಹಾಗೂ ತನುಷ್ ತಮ್ಮಯ್ಯ ತಲಾ ೧ ಮತ್ತು ನಾಟೋಳಂಡ ತಂಡದ ಚಿಣ್ಣಪ್ಪ ಹಾಗೂ ಕೀರ್ತನ್ ಪೂವಣ್ಣ ೧ ಗೋಲು ದಾಖಲಿಸಿದರು.
ಮೈನಪಂಡ ಮತ್ತು ಕೂಪದಿರ ತಂಡಗಳ ನಡುವಿನ ಪಂದ್ಯದಲ್ಲಿ ೩-೨ ಗೋಲುಗಳ ಅಂತರದಲ್ಲಿ ಮೈನಪಂಡ ತಂಡ ಗೆಲುವು ದಾಖಲಿಸಿತು. ಮಲ್ಲಜಿರ ಮತ್ತು ಮಲ್ಲಮಾಡ ತಂಡಗಳ ನಡುವಿನ ಪಂದ್ಯದಲ್ಲಿ ೫-೨ ಗೋಲುಗಳ ಅಂತರದಲ್ಲಿ ಮಲ್ಲಮಾಡ ತಂಡ ಗೆಲುವು ದಾಖಲಿಸಿತು.
ಮೈದಾನ ೩(ಪೊಲೀಸ್ ಕವಾಯತ್ತು ಮೈದಾನ)ರಲ್ಲಿ ತೆನ್ನಿರಾ ಮತ್ತು ಕೆಳಪಂಡ ತಂಡಗಳ ನಡುವೆ ಪಂದ್ಯಾವಳಿ ನಡೆದಿದ್ದು, ಕೆಳಪಂಡ ತಂಡ ತೆನ್ನಿರಾ ತಂಡದ ವಿರುದ್ಧ ೬ ಗೋಲು ದಾಖಲಿಸಿ ಜಯಗಳಿಸಿತು. ಕೇಕಡ ಮತ್ತು ಮಾದಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಾದಂಡ ತಂಡ ೪-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.
ಚಂಗುಲಂಡ ಮತ್ತು ಕಬ್ಬಚ್ಚಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ೩-೧ ಗೋಲುಗಳ ಅಂತರದಲ್ಲಿ ಚಂಗುಲಂಡ ತಂಡ ಜಯ ಸಾಧಿಸಿತು. ಕೀತಿಯಂಡ ಮತ್ತು ಮೆಚಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಮೆಚಂಡ ತಂಡ ೪-೦ ಗೋಲುಗಳ ಅಂತರದಿಂದ ಗೆಲುವು ದಾಖಲಿಸಿತು.
ಕೆಟೋಳಿರ ಮತ್ತು ವಾಟೇರಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ವಾಟೇರಿರ ತಂಡ ೩-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಕೊದೆಂಗಡ ಮತ್ತು ಕೆಚ್ಚೆಟೀರ(ಕಡಗದಾಳು) ತಂಡಗಳ ನಡುವಿನ ಪಂದ್ಯದಲ್ಲಿ ಕಿಚೇಟಿರ ತಂಡ ೨-೧ ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು.
ಇಂದಿನ ಪಂದ್ಯಾಟ ವಿವರ
ಮೈದಾನ ೧
ಬೆಳಿಗ್ಗೆ ೯ ಗಂಟೆಗೆ ಮಂಗೇರಿರ ಮತ್ತು ಅಕ್ಕಪಂಡ, ೧೦ ಗಂಟೆಗೆ ಮಾಣಿಪಂಡ-ಮರುವಂಡ, ೧೧ ಗಂಟೆಗೆ ಮಂಡೆಯಂಡ(ಸೂರ್ಲಬ್ಬಿ)-ಮಂಡೀರ(ನೆಲಜಿ), ಮಧ್ಯಾಹ್ನ ೧ ಗಂಟೆಗೆ ಪಟ್ರಪಂಡ-ಬೊಜ್ಜಂಗಡ, ೨ ಗಂಟೆಗೆ ಪಟ್ಟಚೆರುವಂಡ-ಚೆಟ್ರುಮಾಡ, ೩ ಗಂಟೆಗೆ ಪಟ್ಟಡ-ಮುಕ್ಕಾಟಿರ (ಕುಂಬಳದಾಳು), ೩.೩೦ಕ್ಕೆ ಮೋಟನಾಳಿರ ಮತ್ತು ಬೊಳ್ತಂಡ ಕುಟುಂಬಗಳ ನಡುವೆ ಪಂದ್ಯ ನಡೆಯಲಿದೆ.
ಮೈದಾನ ೨
ಬೆಳಿಗ್ಗೆ ೯ ಗಂಟೆಗೆ ಬೇಪಡಿಯಂಡ-ಅಲ್ಲಾಂಡ, ೧೦ ಗಂಟೆಗೆ ಕಂಬೆಯಂಡ-ಮಚ್ಚೆಟ್ಟಿರ (ಬಾಳುಗೋಡು), ೧೧ ಗಂಟೆಗೆ ಪಾಳೆಯಡ-ಚಿಮ್ಮುಣಿರ, ಮಧ್ಯಾಹ್ನ ೧೨ ಮೂಕಳೇರ-ಕಾನತಂಡ, ೧ ಗಂಟೆಗೆ ಕಾರೇರ-ಕಲ್ಲೇಂಗಡ(ಬೆಳ್ಳೂರು), ೨ ಗಂಟೆಗೆ ನೆರಪಂಡ-ಕಾಂಡಂಡ, ೩ ಗಂಟೆಗೆ ಪೂಳಂಡ-ಚೆರಿಯಂಡ ಕುಟುಂಬಗಳ ನಡುವೆ ಪಂದ್ಯ ನಡೆಯಲಿದೆ.
ಮೈದಾನ ೩
ಬೆಳಿಗ್ಗೆ ೧೦ ಗಂಟೆಗೆ ಮಾದೇಟಿರ-ಮಲ್ಚೀರ, ೧೧ ಗಂಟೆಗೆ ಕೋಡಿರ-ಕೊಡಂದೇರ, ಮಧ್ಯಾಹ್ನ ೧೨ ಗಂಟೆಗೆ ಪಾಲೆಕಂಡ-ಬಾಚಿರ, ೧ ಗಂಟೆಗೆ ಬಡುವಮಂಡ-ಮೇದುರ, ೨ ಗಂಟೆಗೆ ಪಳಂಗೇಟಿರ-ಪೋತಂಡ, ೩ ಗಂಟೆಗೆ ಬೈರಾಜಂಡ-ಬಾಳೆಕುಟ್ಟೀರ, ಸಂಜೆ ೪ ಗಂಟೆಗೆ ಚೊಟ್ಟೆರ-ಪಳಂಗಿಯಂಡ ಕುಟುಂಬಗಳ ನಡುವೆ ಪಂದ್ಯ ನಡೆಯಲಿದೆ.