ಜಿಲ್ಲೆ

ಮುದ್ದಂಡ ಕಪ್ ಹಾಕಿ ಉತ್ಸವ: ೧೯ ತಂಡಗಳು ಮುಂದಿನ ಸುತ್ತಿಗೆ

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಪಂದ್ಯಾಟದಲ್ಲಿ ಗುರುವಾರ ೧೯ ತಂಡಗಳು ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.

ಮಡಿಕೇರಿಯ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನ ೧ರಲ್ಲಿ ಮದ್ರೀರ ಮತ್ತು ಜಮ್ಮಡ ತಂಡಗಳ ನಡುವಿನ ಪಂದ್ಯದಲ್ಲಿ ನಿಗಧಿತ ಅವಧಿಯಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ನಡೆದ ಟೈ ಬ್ರೇಕರ್‌ನಲ್ಲಿ ೪-೨ ಗೋಲುಗಳ ಅಂತರದಲ್ಲಿ ಮದ್ರೀರ ತಂಡ ಜಯ ದಾಖಲಿಸಿತು.

ಪಳಂಗಂಡ ಮತ್ತು ಚಪ್ಪಂಡ ನಡುವಿನ ಪಂದ್ಯದಲ್ಲಿ ೬-೧ ಗೋಲುಗಳ ಅಂತರದಲ್ಲಿ ಅಳಂಗಂಡ ತಂಡ ಜಯ ಸಾಧಿಸಿತು. ಮಾಚಿಮಾಡ ಮತ್ತು ಮೇಚಿಯಂಡ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಮೇಚಿಯಂಡ ತಂಡ ಗೆಲುವು ದಾಖಲಿಸಿತು. ಕೂತಂಡ ಮತ್ತು ಮಂಡೀರ (ನೆಲಜಿ) ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ಕೂತಂಡ ತಂಡ ಜಯ ಸಾಧಿಸಿತು. ಬೊಳ್ಳಂಡ ಮತ್ತು ಕೇಳಪಂಡ ನಡುವಿನ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ನಡೆದ ಟೈ ಬ್ರೇಕರ್‌ನಲ್ಲಿ ೪-೨ ಗೋಲುಗಳ ಅಂತರದಲ್ಲಿ ಕೇಳಪಂಡ ಜಯ ಸಾಧಿಸಿತು. ವಾಟೇರಿರ ಮತ್ತು ಬಾಚಿನಾಡಂಡ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಿಂದ ವಾಟೇರಿರ ತಂಡ ಜಯ ಸಾಧಿಸಿತು. ಕೇಚೇಟಿರ(ಕಡಗದಾಳು) ಮತ್ತು ಬಡ್ಡೀರ ನಡುವಿನ ಪಂದ್ಯದಲ್ಲಿ ಕೇಚೇಟಿರ ತಂಡ ೩-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.

ಮೈದಾನ ೨ರಲ್ಲಿ ನಡೆದ ಪಂದ್ಯದಲ್ಲಿ ಮಂಡೇಪಂಡ ಮತ್ತು ಮಾಚಂಡ ನಡುವಿನ ಪಂದ್ಯದಲ್ಲಿ ೬-೦ ಗೋಲುಗಳ ಅಂತರದಲ್ಲಿ ಮಂಡೇಪಂಡ ತಂಡ ಗೆಲುವು ದಾಖಲಿಸಿತು. ಮಂದನೆರವಂಡ ಮತ್ತು ಮಂಡೇಡ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಮಂಡೇಡ ತಂಡ ಗೆಲುವು ಸಾಧಿಸಿತು. ಕಾಂಡೇರ ಮತ್ತು ಮೂಕಳಮಾಡ ತಂಡಗಳ ನಡುವಿನ ಪಂದ್ಯದಲ್ಲಿ ೩-೦ ಗೋಲುಗಳ ಅಂತರದಲ್ಲಿ ಮೂಕಳಮಾಡ ಜಯ ಸಾಧಿಸಿತು. ಚೆರುಮಾಡಂಡ ಮತ್ತು ಚೌರೀರ (ಹೊದವಾಡ) ನಡುವಿನ ಪಂದ್ಯದಲ್ಲಿ ೩-೧ ಗೋಲುಗಳ ಅಂತರದಲ್ಲಿ ಚೆರುಮಾಡಂಡ ಗೆಲುವು ಸಾಧಿಸಿತು. ಮುರುವಂಡ ಮತ್ತು ಚೆರಿಯಪಂಡ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ಮುರುವಂಡ ತಂಡ ಜಯ ಸಾಧಿಸಿತು. ಅಜ್ಜಿನಂಡ ಮತ್ತು ಬೈರೆಟೀರ ನಡುವಿನ ಪಂದ್ಯದಲ್ಲಿ ೩-೧ ಗೋಲುಗಳ ಅಂತರದಲ್ಲಿ ಅಜ್ಜಿನಂಡ ತಂಡ ಜಯ ಸಾಧಿಸಿತು.

ಮೈದಾನ ೩ರಲ್ಲಿ ಅಣ್ಣಾಡಿಯಂಡ ಮತ್ತು ದಾಸಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ತಲಾ ೧ ಗೋಲು ದಾಖಲಿಸುವ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ನಡೆದ ಟೈ ಬ್ರೇಕರ್‌ನಲ್ಲಿ ೪-೧ ಗೋಲುಗಳ ಅಂತರದಲ್ಲಿ ಅಣ್ಣಾಡಿಯಂಡ ತಂಡ ಗೆಲುವು ಸಾಧಿಸಿತು. ಪರದಂಡ ಮತ್ತು ಬೊಪ್ಪಂಡ ನಡುವಿನ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ಪರದಂಡ ತಂಡ ವಿಜಯ ಸಾಧಿಸಿತು. ಮುಡ್ಯೋಳಂಡ ಮತ್ತು ಚೌರೀರ (ಹೊದ್ದೂರು) ನಡುವಿನ ಪಂದ್ಯದಲ್ಲಿ ೩-೧ ಗೋಲುಗಳ ಅಂತರದಲ್ಲಿ ಮುಡ್ಯೋಳಂಡ ತಂಡ ಗೆಲುವು ದಾಖಲಿಸಿತು. ಪಾಡೆಯಂಡ ಮತ್ತು ಕರ್ತಚ್ಚಿರ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ಪಾಡೆಯಂಡ ತಂಡ ಜಯ ಸಾಧಿಸಿತು. ಮೈಂದಪಂಡ ಮತ್ತು ಬಟ್ಟೀರ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಮೈಂದಪಂಡ ಗೆಲುವು ಸಾಧಿಸಿತು. ಮಲ್ಲಮಾಡ ಮತ್ತು ಆಪಾಡಂಡ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಮಲ್ಲಮಾಡ ತಂಡ ಜಯ ಸಾಧಿಸಿತು.