ಜಿಲ್ಲೆ

ಮುದ್ದಂಡ ಕಪ್ ಹಾಕಿ ಉತ್ಸವ : ೧೮ ತಂಡಗಳು ಮುಂದಿನ ಸುತ್ತಿಗೆ

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಪಂದ್ಯಾಟದಲ್ಲಿ ಶುಕ್ರವಾರ ೧೮ ತಂಡಗಳು ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.

ಮಡಿಕೇರಿಯ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನ ಮಲಚೀರ ಮತ್ತು ಬೊಟ್ಟೋಳಂಡ ನಡುವೆ ನಡೆದ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಬೊಟ್ಟೋಳಂಡ ಗೆಲುವು ಸಾಧಿಸಿತು. ಕನ್ನಂಡ ಮತ್ತು ಚೊಟ್ಟೆರ ನಡುವಿನ ಪಂದ್ಯದಲ್ಲಿ ೪-೧ ಗೋಲುಗಳ ಅಂತರದಲ್ಲಿ ಕನ್ನಂಡ ತಂಡ ಜಯ ಸಾಧಿಸಿತು. ಕನ್ನಂಡ ಪರ ಶರಣ್ ಹಾಗೂ ರೋಹನ್ ಅಯ್ಯಪ್ಪ ತಲಾ ೨ ಗೋಲು ದಾಖಲಿಸಿದರು. ಕೋಡಿರ ಮತ್ತು ಪಾಲೆಕಂಡ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಕೋಡಿರ ತಂಡ ಗೆಲುವು ದಾಖಲಿಸಿತು.

ಬಡುವಮಂಡ ಮತ್ತು ಪಳಂಗೇಟಿರ ನಡುವಿನ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ಬಡುವಮಂಡ ಜಯ ಸಾಧಿಸಿತು. ಬಡುವಮಂಡ ಪರ ಎಲ್ಲಾ ೫ ಗೋಲುಗಳನ್ನು ಭರ್ಜರಿಯಾಗಿ ಭಾರಿಸಿ ಗೌತಮ್ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ನೆಲ್ಲಮಕ್ಕಡ ಮತ್ತು ಕೋಳುಮಾಡಂಡ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ನೆಲ್ಲಮಕ್ಕಡ ಜಯ ಸಾಧಿಸಿತು. ಮುಕ್ಕಾಟಿರ (ಕಡಗದಾಳು) ಮತ್ತು ಚಂದುರ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಮುಕ್ಕಾಟಿರ ತಂಡ ಜಯ ಸಾಧಿಸಿತು.

ಮೈದಾನ ೨ರಲ್ಲಿ ಬಿದ್ದಾಟಂಡ ಮತ್ತು ಪಾಲಂದಿರ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಪಾಲಂದಿರ ಜಯ ದಾಖಲಿಸಿತು. ಮಂಡಂಗಡ ಮತ್ತು ಬೇರೆರ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಬೇರೆರ ತಂಡ ಗೆಲುವು ಸಾಧಿಸಿತು. ಪುಳ್ಳಂಗಡ ಮತ್ತು ಮಲ್ಲಂಗಡ ನಡುವಿನ ಪಂದ್ಯದಲ್ಲಿ ೩-೧ ಗೋಲುಗಳ ಅಂತರದಲ್ಲಿ ಪುಳ್ಳಂಗಡ ತಂಡ ಜಯ ಸಾಧಿಸಿತು. ಮಚ್ಚಾಮಾಡ ಮತ್ತು ಅಜ್ಜೇಟಿರ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಅಜ್ಜೇಟಿರ ಜಯ ಸಾಧಿಸಿತು. ಕುಪ್ಪಂಡ(ಕೈಕೇರಿ) ಮತ್ತು ಮಾಳೆಯಂಡ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಕುಪ್ಪಂಡ ತಂಡ ಗೆಲುವು ದಾಖಲಿಸಿತು. ನಾಗಂಡ ಮತ್ತು ಚೆಂಬಾಂಡ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ನಾಗಂಡ ತಂಡ ಜಯ ಸಾಧಿಸಿತು.

ಮೈದಾನ ೩ರಲ್ಲಿ ತೀತಮಾಡ ಮತ್ತು ತಾತಂಡ ತಂಡಗಳ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ತೀತಮಾಡ ತಂಡ ಗೆಲುವು ದಾಖಲಿಸಿತು. ತಾಚಮಂಡ ಮತ್ತು ಐನಂಡ ನಡುವಿನ ಪಂದ್ಯದಲ್ಲಿ ೬-೦ ಗೋಲುಗಳ ಅಂತರದಲ್ಲಿ ಐನಂಡ ತಂಡ ಜಯ ಸಾಧಿಸಿತು. ಐಚೆಟ್ಟಿರ ಮತ್ತು ಕಾಳೆಯಂಡ ನಡುವಿನ ಪಂದ್ಯದಲ್ಲಿ ೬-೦ ಗೋಲುಗಳ ಅಂತರದಲ್ಲಿ ಐಚೆಟ್ಟಿರ ಜಯ ದಾಖಲಿಸಿತು.

ಕಳಕಂಡ ಮತ್ತು ಬಲ್ಲಣಮಾಡ ನಡುವೆ ನಡೆದ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಕಳಕಂಡ ವಿಜಯ ಸಾಧಿಸಿತು. ಅಪ್ಪಚ್ಚೀರ ಮತ್ತು ನಾಳಿಯಂಡ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ನಾಳಿಯಂಡ ತಂಡ ಗೆಲುವು ಸಾಧಿಸಿತು. ಕೊಂಗೇಟಿರ ಮತ್ತು ಪಂದ್ಯಂಡ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ಕೊಂಗೇಟಿರ ತಂಡ ಗೆಲುವು ದಾಖಲಿಸಿತು.

ಮೈದಾನ ೧

ಬೆಳಿಗ್ಗೆ ೯ ಗಂಟೆಗೆ ಮೂಕೋಂಡ ಮತ್ತು ಕುಂಡ್ಯೋಳಂಡ, ೧೦ ಗಂಟೆಗೆ ಆದೇಂಗಡ ಮತ್ತು ನಾಪಂಡ, ೧೧ ಗಂಟೆಗೆ ಕೇಲೇಟಿರ ಮತ್ತು ಕುಪ್ಪಂಡ (ನಾಂಗಾಲ) ಮಧ್ಯಾಹ್ನ ೧ ಗಂಟೆಗೆ ಮಾರ್ಚಂಡ ಮತ್ತು ಕೋಳೇರ, ೨ ಗಂಟೆಗೆ ಶಾಂತೆಯಂಡ ಮತ್ತು ಅಪ್ಪಚೆಟ್ಟೋಳಂಡ, ೩ ಗಂಟೆಗೆ ಮನೆಯಪಂಡ ಮತ್ತು ಚೆಕ್ಕೇರ ಕುಟುಂಬಗಳು ಪೈಪೋಟಿ ನಡೆಸಲಿದೆ.

ಮೈದಾನ ೨

ಬೆಳಿಗ್ಗೆ ೯.೩೦ಕ್ಕೆ ಮಾಳೇಟಿರ(ಕೆದಮುಳ್ಳೂರು) ಮತ್ತು ಮತ್ರಂಡ, ೧೦.೩೦ಕ್ಕೆ ಚೋಡುಮಾಡ ಮತ್ತು ಅನ್ನಾಡಿಯಂಡ, ಮಧ್ಯಾಹ್ನ ೧೨.೩೦ಕ್ಕೆ ಪರದಂಡ ಮತ್ತು ಮುಂಡ್ಯೋಳಂಡ, ೧.೩೦ ಗಂಟೆಗೆ ಪಾಡೆಯಂಡ ಮತ್ತು ಮೈಂದಪಂಡ, ೨.೩೦ ಗಂಟೆಗೆ ಮಲ್ಲಮಾಡ ಮತ್ತು ಐನಂಡ ಕುಟುಂಬಗಳು ಸೆಣಸಾಟ ನಡೆಸಲಿದೆ.

೧೨ಎಂಡಿಕೆ೧೯: ಮೈದಾನ ೧ರಲ್ಲಿ ನಡೆದ ಬಡುವಮಂಡ ಮತ್ತು ಪಳಂಗೇಟಿರ ತಂಡಗಳ ಹಣಾಹಣಿ ದೃಶ್ಯ.

-ಲೋಗೋ