ಜಿಲ್ಲೆ

ಮುದ್ದಂಡ ಕಪ್ ಹಾಕಿ ಉತ್ಸವ : ೧೮ ತಂಡಗಳು ಮುಂದಿನ ಸುತ್ತಿಗೆ

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಪಂದ್ಯಾಟದಲ್ಲಿ ಬುಧವಾರ ೧೮ ತಂಡಗಳು ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.

ಮಡಿಕೇರಿಯ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನ ೧ರಲ್ಲಿ ಅಂಜಪರವಂಡ ಮತ್ತು ತಿರುಟೆರ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಅಂಜಪರವಂಡ ಜಯ ಸಾಧಿಸಿತು. ಕೊಚ್ಚೆರ ಮತ್ತು ಮುಕ್ಕಾಟಿರ(ಬೋಂದ) ನಡುವಿನ ಪಂದ್ಯದಲ್ಲಿ ೩-೦ ಗೋಲುಗಳ ಅಂತರದಲ್ಲಿ ಮುಕ್ಕಾಟಿರ ತಂಡ ಗೆಲುವು ದಾಖಲಿಸಿತು. ಚೋಳಂಡ ಮತ್ತು ಬೊಳ್ಳೆರ ನಡುವಿನ ಪಂದ್ಯದಲ್ಲಿ ನಿಗಧಿತ ಅವಧಿಯಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೪-೨ ಗೋಲುಗಳ ಅಂತರದಲ್ಲಿ ಬೊಳ್ಳೆರ ತಂಡ ಗೆಲುವು ದಾಖಲಿಸಿತು.

ಮಾತಂಡ ಮತ್ತು ಚಂಗುಲಂಡ ತಂಡಗಳ ನಡುವಿನ ಪಂದ್ಯದಲ್ಲಿ ೩-೦ ಗೋಲುಗಳ ಅಂತರದಲ್ಲಿ ಚಂಗುಲಂಡ ತಂಡ ಜಯ ಸಾಧಿಸಿತು. ಮಂಡೇಟಿರ ಮತ್ತು ಮೇಚಂಡ ನಡುವಿನ ಪಂದ್ಯದಲ್ಲಿ ೪-೨ ಗೋಲುಗಳ ಅಂತರದಲ್ಲಿ ಮಂಡೇಟಿರ ತಂಡ ಗೆಲುವು ಸಾಧಿಸಿತು. ಕೋಡಿಮಣಿಯಂಡ ಮತ್ತು ಮಾದಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ತಲಾ ೧ ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈಬೇಕರ್‌ನಲ್ಲಿ ೭-೬ ಗೋಲುಗಳ ಅಂತರದಲ್ಲಿ ಮಾದಂಡ ತಂಡ ಗೆಲುವು ದಾಖಲಿಸಿತು.

ಮೈದಾನ ೨ರಲ್ಲಿ ಅಮ್ಮಣಿಚಂಡ ಮತ್ತು ಕುಟ್ಟಂಡ(ಕಾರ್ಮಾಡ್) ನಡುವಿನ ಪಂದ್ಯದಲ್ಲಿ ಅಮ್ಮಣಿಚಂಡ ತಂಡ ೪-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಚಿಲ್ಲವಂಡ ಮತ್ತು ಬೊಳಕಾರಂಡ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಬೊಳಕಾರಂಡ ಜಯ ಸಾಧಿಸಿತು. ಅಜ್ಜಮಾಡ ಮತ್ತು ಕಂಜಿತಂಡ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಅಜ್ಜಮಾಡ ತಂಡ ಗೆಲುವು ದಾಖಲಿಸಿತು. ಪೊನ್ನಿಮಾಡ ಮತ್ತು ಕೊಟ್ಟಂಗಡ ನಡುವಿನ ಪಂದ್ಯದಲ್ಲಿ ೭-೦ ಗೋಲುಗಳ ಅಂತರದಲ್ಲಿ ಕೊಟ್ಟಂಗಡ ತಂಡ ಗೆಲುವು ದಾಖಲಿಸಿತು. ಮೇರಿಯಂಡ ಮತ್ತು ಬೊಳ್ಳಚಂಡ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಮೇರಿಯಂಡ ಜಯ ಸಾಧಿಸಿತು. ಕುಟ್ಟಂಡ (ಅಮ್ಮತ್ತಿ) ಮತ್ತು ಕನ್ನಂಬೀರ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಕುಟ್ಟಂಡ ಗೆಲುವು ದಾಖಲಿಸಿತು.

ಮೈದಾನ ೩ರಲ್ಲಿ ನಂದೇಟಿರ ಮತ್ತು ನಾಗಂಡ ನಡುವಿನ ಪಂದ್ಯದಲ್ಲಿ ೩-೧ ಗೋಲುಗಳ ಅಂತರದಲ್ಲಿ ನಾಗಂಡ ವಿಜಯ ಸಾಧಿಸಿತು. ಕಲಿಯಾಟಂಡ ಮತ್ತು ಚೇರಂಡ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಕಲಿಯಾಟಂಡ ತಂಡ ಜಯ ಸಾಧಿಸಿತು. ಐತಿಚಂಡ ಮತ್ತು ಅಮ್ಮಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳ ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೧೧-೧೦ ಗೋಲುಗಳ ಅಂತರದಲ್ಲಿ ಅಮ್ಮಂಡ ತಂಡ ಗೆಲುವು ದಾಖಲಿಸಿತು. ಬಾರಿಯಂಡ ಮತ್ತು ಮಾಳೇಟಿರ(ಕೆದಮಳ್ಳೂರು) ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಮಾಳೇಟಿರ ತಂಡ ಗೆಲುವು ಸಾಧಿಸಿತು. ಸುಳ್ಳಿಮಾಡ ಮತ್ತು ಮತ್ರಂಡ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಮತ್ರಂಡ ತಂಡ ಜಯ ಸಾಧಿಸಿತು. ಕೊಕ್ಕಂಡ ಮತ್ತು ಚೋಡುಮಾಡ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಚೋಡುಮಾಡ ಗೆಲುವು ದಾಖಲಿಸಿತು.

ಮೈದಾನ-೧

ಬೆಳಿಗ್ಗೆ ೯ ಗಂಟೆಗೆ ಮದ್ರೀರ ಮತ್ತು ಜಮ್ಮಡ, ೧೦ ಗಂಟೆಗೆ ಪಳಂಗಂಡ ಮತ್ತು ಚಪ್ಪಂಡ, ೧೧ ಗಂಟೆಗೆ ಮಾಚಿಮಾಡ ಮತ್ತು ಮೇಚಿಯಂಡ, ಮಧ್ಯಾಹ್ನ ೧೨ ಗಂಟೆಗೆ ಕೂತಂಡ ಮತ್ತು ಮಂಡೀರ(ನೆಲಜಿ), ೧ ಗಂಟೆಗೆ ಬೊಳ್ಳಂಡ ಮತ್ತು ಕೇಳಪಂಡ, ೨ ಗಂಟೆಗೆ ವಾಟೇರಿರ ಮತ್ತು ಬಾಚಿನಾಡಂಡ, ೩ ಗಂಟೆಗೆ ಬಡ್ಡೀರ ಮತ್ತು ಕೇಚೇಟಿರ(ಕಡಗದಾಳು) ಕುಟುಂಬಗಳು ಸೆಣಸಾಟ ನಡೆಸಲಿದೆ.

ಮೈದಾನ-೨

ಬೆಳಿಗ್ಗೆ ೯.೩೦ ಗಂಟೆಗೆ ಮಂಡೇಪಂಡ ಮತ್ತು ಮಾಚಂಡ, ೧೦.೩೦ ಗಂಟೆಗೆ ಮಂದನೆರವಂಡ ಮತ್ತು ಮಂಡೇಡ, ೧೧.೩೦ಕ್ಕೆ ಕಾಂಡೇರ ಮತ್ತು ಮೂಕಳಮಾಡ, ೧ ಗಂಟೆಗೆ ಚೆರುಮಾಡಂಡ ಮತ್ತು ಚೌರೀರ(ಹೊದವಾಡ), ೨ ಗಂಟೆಗೆ ಮುರುವಂಡ ಮತ್ತು ಚೆರಿಯಪಂಡ, ೩ ಗಂಟೆಗೆ ಅಜ್ಜಿನಂಡ ಮತ್ತು ಬೈರೆಟೀರ ಕುಟುಂಬಗಳು ಸೆಣಸಾಟ ನಡೆಸಲಿದೆ.

ಮೈದಾನ ೩

೯ ಗಂಟೆಗೆ ಅಣ್ಣಾಡಿಯಂಡ ಮತ್ತು ದಾಸಂಡ, ೧೦ ಗಂಟೆಗೆ ಪರದಂಡ ಮತ್ತು ಬೊಪ್ಪಂಡ, ೧೧ ಗಂಟೆಗೆ ಮುಡ್ಯೋಳಂಡ ಮತ್ತು ಚೌರೀರ(ಹೊದ್ದೂರು), ೧ ಗಂಟೆಗೆ ಪಾಡೆಯಂಡ ಮತ್ತು ಕರ್ತಚ್ಚಿರ, ೨ ಗಂಟೆಗೆ ಮೈಂದಪಂಡ ಮತ್ತು ಬಟ್ಟೀರ, ೩ ಗಂಟೆಗೆ ಮಲ್ಲಮಾಡ ಮತ್ತು ಆಪಾಡಂಡ ಕುಟುಂಬಗಳು ಸೆಣಸಾಟ ನಡೆಸಲಿದೆ.