ಮಂಡ್ಯ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂದುಗಳ ನರಮೇಧ ವಿರೋಧಿಸಿ ಮೂಡಲಬಾಗಿಲು ಹನುಮ ಮಾಲಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಪಶ್ಚಿಮ ಬಂಗಾಳದಲ್ಲಿ ಹರಾಜಕತೆ ಉಂಟಾಗಿದೆ. ಸಂವಿಧಾನ ನಶಿಸಿ ಹೋಗಿದ್ದು, ಮುರ್ಷಿದಾಬಾದ್ ಹಾಗೂ ಇನ್ನು ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಮುಸಲ್ಮಾನರು ಹಿಂದುಗಳ ವಿರುದ್ಧ ನಡೆಸುತ್ತಿರುವ ನರಮೇಧವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹಿಂದುಗಳು ಈ ಕೂಡಲೇ ಪಶ್ಚಿಮ ಬಂಗಾಳವನ್ನು ಬಿಟ್ಟುಹೋಗಬೇಕೆಂದು ಎಚ್ಚರಿಕೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ವಿರುದ್ಧವಾಗಿ ಹಿಂದುಗಳ ಮನೆ, ಅಂಗಡಿ, ಕೊಳ್ಳೆ, ಹೊಡೆದು ಧ್ವಂಸಗೊಳಿಸಲಾಗುತ್ತಿದೆ. ಕಂಡ ಕಂಡ ಹಿಂದುಗಳನ್ನು ಕೊಲೆ ಮಾಡಲಾಗುತ್ತಿದೆ. ಹೆಣ್ಣುಮಕ್ಕಳನ್ನು ಎಳೆದೊಯ್ದು ಅತ್ಯಾಚಾರ ಎಸಗಲಾಗುತ್ತಿದೆ. ಹತ್ಯೆ, ಆಸ್ತಿ ದರೋಡೆ, ಅತ್ಯಾಚಾರ, ಮನೆಧ್ವಂಸಗಳಂತಹ ಕೃತ್ಯಗಳು ನಡೆಯುತ್ತಿದ್ದರೂ ಅಲ್ಲಿನ ಸರ್ಕಾರ ಯಾವ ಕ್ರಮ ಕೈಗೊಂಡಿಲ್ಲ. ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ರಕ್ಷಣೆಗೆ ರಾಷ್ಟ್ರಪತಿ ಆಡಳಿತ ಹೇರಿ ಈ ಹತ್ಯಾಕಾಂಡಗಳನ್ನು ನಿಲ್ಲಿಸಬೇಕು. ಸೇನೆಯನ್ನು ನಿಯೋಜನೆ ಮಾಡಿ ಎನ್‌ಐಎ ಮೂಲಕ ತನಿಖೆಗೊಳಪಡಿಸಿ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿರುವವರಿಗೆ ಕಠಿಣ ಶಿಕ್ಷೆ ವಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಪಂಚಾಕ್ಷರಿ ಗಂಗಡ್ಕರ್, ಹರ್ಷ, ಮಹಂತಪ್ಪ, ಚಂದ್ರಶೇಖರ್ ಇತರರಿದ್ದರು.