ಮುದಗಲ್‌ನ ಪುರಸಭೆ ಕಚೇರಿಯಲ್ಲಿ ಅಧ್ಯಕ್ಷೆ ಮಹಾದೇವಮ್ಮ ಗುತ್ತೇದಾರ ಧ್ವಜಾರೋಹಣ ನೆರವೇರಿಸಿದರು. ಪುರಸಭೆ ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್, ವ್ಯವಸ್ಥಾಪಕ ಸುರೇಶ ಹೊನ್ನಳ್ಳಿ, ಸದಸ್ಯ ಎಸ್.ಆರ್.ರಸೂಲ್ ಇತರರಿದ್ದರು. 
ಜಿಲ್ಲೆ

ಮುದಗಲ್‌ನ ವಿವಿಧೆಡೆ ಗಣತಂತ್ರ ಸಂಭ್ರಮ

ಮುದಗಲ್: ಪಟ್ಟಣ ಸೇರಿದಂತೆ ವಿವಿಧೆಡೆ ಭಾನುವಾರ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಅಪರಾಧ ವಿಭಾಗದ ಪಿಎಸ್‌ಐ ಛತ್ರಪ್ಪ ರಾಠೋಡ್ ಧ್ವಜಾರೋಹಣ ನೆರವೇರಿಸಿದರು.

ಕ್ರಿಸ್ತಜ್ಯೋತಿ ಪ್ರೌಢ ಶಾಲೆಯಲ್ಲಿ ವಂದನೇಯ ಸ್ವಾಮಿ ಪೊನ್ನುಸ್ವಾಮಿ, ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಸಿದ್ದರಾಮಪ್ಪ ಛಲವಾದಿ, ಬಾಲಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಪಾಲಾಕ್ಷರಾವ್, ಸರ್ಕಾರಿ ಪಪೂ ಕಾಲೇಜಿನಲ್ಲಿ ಸರೋಜಾ, ಸಿಎಚ್‌ಸಿಯಲ್ಲಿ ಡಾ. ಗೀತಾಂಜಲಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿದ್ದರಾಮ ಪಾಟೀಲ್, ಬಸ್ ನಿಲ್ದಾಣದಲ್ಲಿ ನಿಯಂತ್ರಣಾಧಿಕಾರಿ ರಾಜಾಸಾಬ್ ಖುರೇಷಿ, ಸರ್ಕಾರಿ ಹಿರಿಯ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ದ್ಯಾಮಣ್ಣ ಧ್ವಜಾರೋಹಣ ನೆರವೇರಿಸಿದರು.

ಪುರಸಭೆ ಆವರಣದಲ್ಲಿ ಅಧ್ಯಕ್ಷೆ ಮಹಾದೇವಮ್ಮ ಗುತ್ತೇದಾರ, ಮತ್ತು ನಾಡಕಚೇರಿಯಲ್ಲಿ ಉಪತಹಸೀಲ್ದಾರ್ ತುಳಜಾರಾಮ್ ಸಿಂಗ್ ಧ್ವಜಾರೋಹಣ ನೆರವೇರಿಸಿದರು. ಪುರಸಭೆ ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್, ವ್ಯವಸ್ಥಾಪಕ ಸುರೇಶ ಹೊನ್ನಳ್ಳಿ, ಸದಸ್ಯ ಎಸ್.ಆರ್.ರಸೂಲ್, ಮೆಹಬೂಬಸಾಬ್ ಕಡ್ಡಿಪುಡಿ, ತಸ್ಲೀಮ್ ಮುಲ್ಲಾ, ಹನುಮಂತ ವಾಲ್ಮೀಕಿ, ಗುಂಡಪ್ಪ ಗಂಗಾವತಿ, ದುರಗಪ್ಪ ಕಟ್ಟಿಮನಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಕರಿಯಪ್ಪ ಯಾದವ್, ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್.ಎನ್. ಅಕ್ಕಿ, ರಮೇಶ್ ದೀಕ್ಷಿತ್ ಇತರರಿದ್ದರು.