ಮುದಗಲ್ ಸಮೀಪದ ಬಯ್ಯಪೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕೊಠಡಿಯನ್ನು ಎಂಎಲ್ಸಿ ಶರಣಗೌಡ ಬಯ್ಯಪೂರು ಮಂಗಳವಾರ ಉದ್ಘಾಟಿಸಿದರು. ಚಾಲನೆ ನೀಡಿದರು. ಮುಖ್ಯ ಶಿಕ್ಷಕರಾದ ಸುಲೋಚನಾ, ರಾಜಶೇಖರ ರೆಡ್ಡಿ, ಕಿಯೋನಿಕ್ಸ್ ಆಡಳಿತಾಧಿಕಾರಿ ಬಸವರಾಜ ಹಿರೇಮಠ, ಶಿಕ್ಷಕರಾದ ಮಂಜುನಾಥ, ಹನುಮನಗೌಡ ಇದ್ದರು. 
ಜಿಲ್ಲೆ

ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ

ರುದ್ರಪ್ಪ ವಾಲಿ

ಮುದಗಲ್: ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಸ್ಥಾನಗಳಿಗೆ ತಲುಪಲು ಪ್ರಯತ್ನಿಸಬೇಕೆಂದು ಎಂಎಲ್ಸಿ ಶರಣಗೌಡ ಬಯ್ಯಪೂರು ಹೇಳಿದರು.

ಬಯ್ಯಪುರು ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಮಂಜೂರಾದ ಸ್ಮಾರ್ಟ್ ಕ್ಲಾಸ್‌ಗೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಎರಡು ಕೋಟಿ ರೂ. ವೆಚ್ಚದಲ್ಲಿ ಲಿಂಗಸುಗೂರು ಮತ್ತು ಕುಷ್ಟಗಿ ತಾಲೂಕಿನ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಲಾಗಿದೆ. ಶಿಕ್ಷಕರು ಸ್ಮಾರ್ಟ್ ಕ್ಲಾಸ್ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದರು. ಶಿಕ್ಷಕರಾದ ಶೇಖ್ ದಸ್ತಗಿರ, ಅಂಬಿಕಾ, ಮಹಾದೇವಿ, ಶಿವಶಂಕರ್, ಇಂದಿರಾ, ಚನ್ನಾರಡ್ಡಿ ಬಿರದಾರ, ಮುಖಂಡ ಹನುಮನಗೌಡ ಚಿನ್ನಾಪುರ ಇದ್ದರು.