ಮುದಗಲ್‌ನ ಪುರಸಭೆ ಸಭಾಂಗಣದಲ್ಲಿ ಸ್ವಚ್ಛತಾ ಆಂದೋಲನದ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ನಬಿ ಕಂದಗಲ್, ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್, ಸದಸ್ಯರಾದ ಶಿವಗ್ಯಾನಪ್ಪ ಬಡಕುರಿ, ಬಾಬು ಉಪ್ಪಾರ, ಮುಖಂಡರಾದ ತಮ್ಮಣ್ಣ ಗುತ್ತೇದಾರ, ಮೂಬೂಬ್ ಬಾರಿಗಿಡ, ಹುಸೇನ್ ಅಲಿ, ಹಸನ್ ಖವ್ವಾ, ಸೈಯದ್ ಸಾಬ್ ಸೇರಿದಂತೆ ಪುರಸಭೆ ಸಿಬ್ಬಂದಿ ಇದ್ದರು. 
ಜಿಲ್ಲೆ

ಪರಿಸರ ಸ್ವಚ್ಛತೆಗೆ ಆದ್ಯತೆ ಸಿಗಲಿ

ಮುದಗಲ್: ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಪುರಸಭೆ ಸದಸ್ಯರು ಹಾಗೂ ಪೌರ ಕಾರ್ಮಿಕರು, ಸಿಬ್ಬಂದಿ ಸ್ವಚ್ಛತಾ ಆಂದೋಲನ ಕುರಿತು ಬುಧವಾರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ನೈರ್ಮಲ್ಯಾಧಿಕಾರಿ ಆರೀಪುನ್ನಿಸಾ ಬೇಗಂ ಪ್ರತಿಜ್ಞಾ ವಿಧಿ ಬೋಧಿಸಿದರು. ಗ್ರಾಮ, ಪಟ್ಟಣ, ವಾರ್ಡ್ ಹಾಗೂ ಸುತ್ತಲಿನ ಪರಿಸರವನ್ನು ಶುಚಿಯಗಿಟ್ಟುಕೊಳ್ಳುವ ಎಲ್ಲರ ಮೂಲ ಧೇಯೋದ್ದೇಶವಾಗಲಿ ಎಂದು ಅರಿವು ಮೂಡಿಸಲಾಯಿತು. ನಂತರ ಪುರಸಭೆ ಪೌರ ಕಾರ್ಮಿಕರು ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಸಂಚರಿಸಿ ಘೋಷಣೆಗಳನ್ನು ಕೂಗಿ ಸ್ವಚ್ಛ ನಗರಕ್ಕೆ ನಾಂದಿ ಹಾಡಲು ನಮ್ಮೊಂದಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.