ಮುದಗಲ್ ಸಮೀಪದ ಕನಸಾವಿಯಲ್ಲಿ ಶ್ರೀಅನ್ನದಾನೀಶ್ವರ ಜಾತ್ರಾಮಹೋತ್ಸವ ಅಂಗವಾಗಿ ರಥೋತ್ಸವ ಅದ್ದೂರಿಯಾಗಿ ಶುಕ್ರವಾರ ಜರುಗಿತು. 
ಜಿಲ್ಲೆ

ಕನಸಾವಿ ಶ್ರೀ ಅನ್ನದಾನೀಶ್ವರ ಜಾತ್ರಾಮಹೋತ್ಸವ ಸಂಪನ್ನ

ಪ್ರವೀಣ ಉದುಸಾ ದಲಬಂಜನ್


ಮುದಗಲ್: ಸಮೀಪದ ಕನಸಾವಿಯಲ್ಲಿ ಶ್ರೀಅನ್ನದಾನೀಶ್ವರ ಜಾತ್ರಾಮಹೋತ್ಸವ ಶುಕ್ರವಾರ ರಥೋತ್ಸವದೊಂದಿಗೆ ಅದ್ದೂರಿಯಾಗಿ ಸಂಪನ್ನಗೊಂಡಿತು.

ಗುರುವಾರ ಬೆಳಗ್ಗೆ ಮಠದಲ್ಲಿ ನಂದವಾಡಗಿಯ ಅಭಿನವ ಚನ್ನಬಸವ ಶಿವಾಚಾರ್ಯರಿಂದ ಷಟಸ್ಥಲ ಧ್ವಜಾರೋಹಣ ಹಾಗೂ ಲಿಂಗೈಕ್ಯ ಶ್ರೀಅನ್ನದಾನೀಶ್ವರ ಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಮಠದ ಪೀಠಾಧೀಶ ಮುಪ್ಪಿನ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಬೆಳಗ್ಗೆ ಕತೃಗದ್ದುಗೆಗೆ ರುದ್ರಾಭಿಷೇಕ, ಮಹಾಗಣರಾಧನೆ, ಧಾರ್ಮಿಕ ಪೂಜೆ ಕಾರ್ಯಕ್ರಮ ಅನ್ನದಾಸೋಹ ನಡೆಯಿತು. ಸಾಯಂಕಾಲ ವಾದ್ಯಮೇಳದೊಂದಿಗೆ ಮಹಿಳೆಯರು ಉಚ್ಛಾಯ ಎಳೆದರು.

ಶುಕ್ರವಾರ ಕತೃಗದ್ದುಗೆಗೆ ರುದ್ರಾಭಿಷೇಕ, ಒಳಬಳ್ಳಾರಿ ಚನ್ನಬಸವೇಶ್ವರ ಪುರಾಣ ಪ್ರವಚನ ಮಹಾಮಂಗಲ, ಅನ್ನದಾಸೋಹ ಹಾಗೂ ಸಂಜೆ ಪಲ್ಲಕ್ಕಿ ಮತ್ತು ರಥೋತ್ಸವ ಅದ್ದೂರಿಯಾಗಿ ಜರುಗಿತು. ಆಳಂದಮಠದ ಮಹಾಂತಲಿಂಗ ಶಿವಚಾರ್ಯ, ಬಿ.ಎಂ.ಈಶ್ವರಯ್ಯ ಸ್ವಾಮಿ, ಗ್ರಾಪಂ.ಅಧ್ಯಕ್ಷ ಶಶಿಧರಗೌಡ, ಪ್ರಮುಖರಾದ ಅಮರೇಗೌಡ, ಯಂಕಣ್ಣ, ಶಂಕ್ರಗೌಡ ಮಟ್ಟೂರು, ಡಾ.ಅಂದಾನೆಪ್ಪ ಕಂಠಿ, ಶೇಖರಪ್ಪ ಗೊರೆಬಾಳ, ಶರಣಪ್ಪ ಕಾರ್ಲಕುಂಟಿ, ಹನಮನಗೌಡ ಕೊಮಲಾಪುರು, ಅಂದಾನಪ್ಪ ನಾಯಕ, ಶಿವಪ್ಪ ಮಡಿವಾಳರ, ಹುಸೇನಪ್ಪ ಶ್ರೀಕಾಂತ, ಕನಕಪ್ಪ ಸೇರಿ ಇನ್ನಿತರರಿದ್ದರು.