ಮುದಗಲ್‌ನ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶಿವಯೋಗ ಸಮಾಧಿಯಿಂದ ಹೊರಬಂದ ರಾಚೋಟೇಶ್ವರ ಶ್ರೀಗಳಿಗೆ ಜಲಾಭಿಷೇಕ ಮಾಡಲಾಯಿತು. ಮಾಜಿ ಶಾಸಕ ದೊಡ್ಡನಗೌಡ ಲೆಕ್ಕಿಹಾಳ, ಎಂಎಲ್ಸಿ ಶರಣಗೌಡ ಬಯ್ಯಪುರ, ಸುರೇಂದ್ರಗೌಡ ಪಾಟೀಲ್ ಇತರರಿದ್ದರು. 
ಜಿಲ್ಲೆ

ಶಿವಯೋಗ ಸಮಾಧಿಯಿಂದ ಹೊರಬಂದ ಸಂತ

ಮುದಗಲ್: ಲೋಕಕಲ್ಯಾಣಾರ್ಥ ಪಟ್ಟಣದ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ 11 ದಿನಗಳಿಂದ ಶಿವಯೋಗ ಸಮಾಧಿ ಕೈಗೊಂಡಿದ್ದ ಅಂತೂರು ಬೆಂತೂರು ಬೂದೀಶ್ವರ ಸಂಸ್ಥಾನ ಮಠದ ರಾಚೋಟೇಶ್ವರ ಶ್ರೀಗಳು ಭಾನುವಾರ ಹೊರಬಂದರು.

ಸಾವಿರಾರು ಭಕ್ತರು ಶ್ರೀಗಳ ದರ್ಶನ ಪಡೆದರು. ಗುರುಗುಂಟಾ ಅಮರೇಶ್ವರದ ಪ್ರಧಾನ ಅರ್ಚಕ ಗಂಗಾಧರಯ್ಯ ಶಾಸ್ತ್ರಿ ನೇತೃತ್ವದ ವಟುಗಳ ತಂಡ ಮಹಾರುದ್ರಾಭಿಷೇಕ, ಅತಿರುದ್ರ ಮಹಾಯಾಗ ಸೇರಿ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿತು.

ನಾಡಿನ ಹರ ಗುರು ಚರ ಮೂರ್ತಿಗಳು, ಜನಪ್ರತಿನಿಧಿಗಳು ಹಾಗೂ ಅಪಾರ ಭಕ್ತಗಣದ ಸಮ್ಮುಖದಲ್ಲಿ ಶಿವಯೋಗ ಸಮಾಧಿಯಲ್ಲಿ ಪ್ರಜಾನಿಷ್ಠರಾಗಿದ್ದ ಶ್ರೀಗಳನ್ನು ಹೊರಗೆ ಕರೆತಂದು ಕ್ಷೀರಾಭಿಷೇಕ, ವೇದಘೋಷಗಳ ಪಠಣ ಹಾಗೂ ಓಂ ನಮಃ ಶಿವಾಯ ಪಠಿಸುತ್ತ ಮಜ್ಜನಗೈದರು. ನಂತರ ನೆರೆದಿದ್ದ ಅಪಾರ ಭಕ್ತರತ್ತ ಸ್ವಾಮೀಜಿ ಕೈಬೀಸಿ ಆಶೀರ್ವಾದ ನೀಡಿದರು. ದೇವಸ್ಥಾನ ಸಮಿತಿಯ ಲಿಂಗಪ್ಪ ಹಣಗಿ, ಅನಿಲ್ ಬುಶೆಟ್ಟಿ, ಮಹೇಶ ವಸ್ತ್ರದ, ಶ್ರೀಕಾಂತಗೌಡ ಪಾಟೀಲ್, ವಿಶ್ವನಾಥ ದೇಸಾಯಿ ಇತರರಿದ್ದರು.